ನವದೆಹಲಿ: ಮ್ಯಾಗಿ ಮೇಲಿನ ಮಾರಾಟ ನಿಷೇಧ ಪ್ರಕರಣ ನಡೆಯುತ್ತಿರುವಾಗಲೇ ಮದರ್ ಡೈರಿ ಹಾಲಿನಲ್ಲಿ ಕಲಬೆರಕೆ ಮತ್ತ ಶೀತಲೀಕರಿಸದ ಕೊಬ್ಬು ಪತ್ತೆಯಾಗಿರುವ ಬಗ್ಗೆ ಕೋಲ್ಕತಾದ ಕೇಂದ್ರ ಆಹಾರ ಲ್ಯಾಬೊರೇಟರಿಯು ವರದಿ ಮಾಡಿದೆ.
ಜನವರಿ ತಿಂಗಳಿನಲ್ಲಿ ಘಾಜಿಯಾಬಾದ್ನ ಮದರ್ ಡೈರಿ ಬೂತ್ನಿಂದ ಹಾಲಿನ ಸ್ಯಾಂಪಲ್ಗಳನ್ನು ಸಂಗ್ರಹಿಸಿ ಜಿಲ್ಲಾ ಆಹಾರ ಮತ್ತು ಔಷಧ ಮಂಡಳಿ(ಎಫ್ಡಿಎ)ಯು ಕೋಲ್ಕತಾ ಲ್ಯಾಬ್ಗೆ ಕಳಿಸಲಾಗಿತ್ತು. ಇಲ್ಲಿ ನಡೆಸಿದ ಪರೀಕ್ಷೆಯಿಂದ ಹಾಲಿನಲ್ಲಿ ಡಿಟರ್ಜೆಂಟ್ ಮತ್ತು ಕೊಬ್ಬು ಇರುವುದು ಪತ್ತೆಯಾಗಿದೆ.
ಘಾಜಿಯಾಬಾದ್ನ ಎಫ್.ಡಿ.ಎ.ಯು ಕೋಲ್ಕತಾ ಲ್ಯಾಬ್ನಿಂದ ಕೆನೆ ಮತ್ತು ಕೆನೆ ರಹಿತ ಎರಡೂ ಮಾದರಿಯ ಹಾಲಿನಲ್ಲಿ ಡಿಟರ್ಜೆಂಟ್ ಹಾಗೂ ಶೀತಲೀಕರಿಸದ ಕೊಬ್ಬು ಇರುವ ಬಗ್ಗೆ ನಡೆಸಿರುವ ಮರು ಪರೀಕ್ಷೆ ವರದಿಗಳನ್ನು ಪಡೆದಿದೆ.
ಈ ಹಾಲಿನ ಮಾದರಿಗಳನ್ನು ಮೊದಲು ಮೀರತ್ನ ಉತ್ತರ ಪ್ರದೇಶ ರಾಜ್ಯ ಲ್ಯಾಬ್ನಲ್ಲಿ ಪರೀಕ್ಷೆ ನಡೆಸಲಾತ್ತು. ಇದರಲ್ಲಿ ಕಲಬೆರಕೆ ಇರುವ ಬಗ್ಗೆ ವರದಿಯಾದ ಬಳಿಕ ಮದರ್ ಡೈರಿಯು ಮರು ಪರೀಕ್ಷೆ ನಡೆಸುವ ಬೇಡಿಕೆ ವ್ಯಕ್ತಪಡಿಸಿತ್ತು. ಈ ಎಲ್ಲಾ ಪರೀಕ್ಷೆಗಳ ವರದಿಗಳನ್ನು ಕೋಲ್ಕತಾದ ಜಿಲ್ಲಾ ನ್ಯಾಯಾಧೀಶ ವಿಮಲ್ ಕುಮಾರ್ ಶರ್ಮಾಗೆ ನೀಡಲಾಗಿದ್ದು, ಅವರು ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿಕಾನೂನು ಕ್ರಮ ಕೈಗೊಳ್ಳಲಿದ್ದಾರೆ.
ಘಾಜಿಯಾಬಾದ್ನ ಆಹಾರ ಮತ್ತು ಔಷಧ ಮಂಡಳಿ ಮುಖ್ಯಸ್ಥರಾದ ವಿನೀತ್ ಕುಮಾರ್ ಅವರು ಈ ಹಾಲಿನ ಮಾದರಿಗಳು ಕಡಿಮೆ ಗುಣಮಟ್ಟದ್ದಾಗಿದ್ದು, ಸೇವನೆಗೆ ಸುರಕ್ಷಿತವಲ್ಲ ಎಂದು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.