ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಯಲ್ಲಿ ಖಾಯಂ ಸ್ಥಾನ ಪಡೆಯುವ ಭಾರತದ ಪ್ರಯತ್ನಕ್ಕೆ ಮಿತ್ರ ರಾಷ್ಟ್ರಗಳೇ ಅಡ್ಡಿಪಡಿಸಿವೆ. ಮಿತ್ರ ರಾಷ್ಟಗಳಾದ ಅಮೇರಿಕ, ಚೀನ, ರಷ್ಯಾ ರಾಷ್ಟ್ರಗಳು ಭದ್ರತಾ ಮಂಡಳಿ ಪುನಾರಚಿಲು ನಿರಾಕರಿಸಿವೆ. ಇದು ಭಾರತದ ಖಾಯಂ ಸ್ಥಾನ ಪಡೆಯುವ ಪ್ರಯತ್ನಕ್ಕೆ ಮಣ್ಣೆರಚಿದಂತಾಗಿದೆ.
ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಸ್ಯಾಮ್ ಕುಟೇಸಾ ಸದಸ್ಯ ರಾಷ್ಟ ಮತ್ತು ಗುಂಪುಗಳ ನಿಲುವುಗಳನ್ನೊಳಗೊಂಡ ಪತ್ರಗಳನ್ನು ಹಂಚಿದ್ದು, ಈ ಮೂರು ರಾಷ್ಟ್ರಗಳು ತಮ್ಮ ಪ್ರಸ್ತಾವನೆ ಸೇರಿಸಲು ನಿರಾಕರಿಸಿವೆ ಎಂದು ಅವರು ತಿಳಿಸಿದ್ದಾರೆ. ಭಾರತ ಭೇಟಿ ಸಂದರ್ಭ ವಿಶ್ವಸಂಸ್ಥೆಯ ಸದಸ್ಯತ್ವಕ್ಕೆ ಬೆಂಬಲಿಸುವುದಾಗಿ ಹೇಳಿದ್ದ ಅಮೇರಿಕ ಅಧ್ಯಕ್ಷ ಬರಾಕ್ ಒಬಾಮ ಈಗ ಭದ್ರತಾ ಮಂಡಳಿ ಸುಧಾರಣೆಗೆ ನಿರಾಕರಿಸಿದ್ದಾರೆ.
ಮತ್ತೊಂದೆಡೆ ರಷ್ಯಾ ಈ ಸುಧಾರಣೆಗೆ ಒಪ್ಪಿಗೆ ನೀಡಿದರೂ ವೀಟೋ ಸೇರಿದಂತೆ ವಿಶೇಷಾಧಿಕಾರದಲ್ಲಿ ಯಾವುದೇ ಬದಲಾವಣೆ ಮಾಡದಂತೆ ಒತ್ತಾಯಿಸಿದೆ. ಈ ಬದಲಾವಣೆಗೆ ಕಾಲಮಿತಿ ಹಾಕಲು ನಿರಾಕರಿಸಿದೆ. ಆದರೆ ಭಾರತದ ವಿಶ್ವಸಂಸ್ಥೆ ಪ್ರತಿನಿಧಿ ಅಶೋಕ್ ಕುಮಾರ್ ಮುಖರ್ಜಿ ಅವರು ಇದಕ್ಕೆ ಉತ್ತಮ ಫಲಿತಾಂಶ ಬರಬೇಕಾದರೆ ಕಾಲಮಿತಿ ಅಗತ್ಯ ಎಂದಿದ್ದಾರೆ.
ಭದ್ರತಾ ಮಂಡಳಿ ಸದಸ್ಯತ್ವಕ್ಕೆ ಭಾರತವನ್ನು ಲಂಡನ್ ಮತ್ತು ಫ್ರಾನ್ಸ್ ಬೆಂಬಲಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.