×
Home About Us Advertise With s Contact Us

ರಾಹುಲ್ ಅವರೇ… ಕೊಟ್ರೋಚಿಯಿಂದ ಎಷ್ಟು ಹಣ ಪಡೆದಿದ್ದೇವೆ ಎಂದು ಅಮ್ಮನನ್ನು ಪ್ರಶ್ನಿಸಿ

sushma

ನವದೆಹಲಿ: ಲಲಿತ್ ಮೋದಿಯವರಿಂದ ಎಷ್ಟು ಹಣ ಪಡೆದಿದ್ದೀರಿ ಎಂದು ಪದೇ ಪದೇ ತನ್ನನ್ನು ಪ್ರಶ್ನಿಸುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ವಾಗ್ದಾಳಿ ನಡೆಸಿದ್ದಾರೆ.

ಹಾಲಿ ಡೇಯನ್ನು ಇಷ್ಟಪಡುವ ರಾಹುಲ್ ಗಾಂಧಿ ಅವರೇ, ಮತ್ತೊಂದು ಬಾರಿ ರಜೆ ಪಡೆಯುವಾಗ ನಿಮ್ಮ ಕುಟುಂಬದ ಇತಿಹಾಸವನ್ನು ಓದಿ ಬಂದು, ಬೋಫೋರ್ಸ್ ಆರೋಪಿ ಕೊಟ್ರೋಚಿಯಿಂದ ಎಷ್ಟು ಹಣ ಪಡೆದಿದ್ದೇವೆ? ತಂದೆ ರಾಜೀವ್ ಗಾಂಧಿ ಏಕೆ ಭೋಪಾಲ್ ಗ್ಯಾಸ್ ಟ್ರ್ಯಾಜಿಡಿ ಆರೋಪಿಯನ್ನು ದೇಶಬಿಟ್ಟು ಹೋಗಲು ಬಿಟ್ಟರು ಎಂಬುದನ್ನು ನಿಮ್ಮ ಅಮ್ಮನ ಬಳಿ ಕೇಳಿ ಎಂದು ಖಾರವಾಗಿ ನುಡಿದಿದ್ದಾರೆ.

ಲಲಿತ್ ಮೋದಿ ಪಾಸ್‌ಪೋರ್ಟ್ ವಿಷಯದಲ್ಲಿ ನಾನು ಯಾವ ಕಾನೂನನ್ನು ಮುರಿಯಲಿಲ್ಲ, ನನ್ನ ಪತಿಯಾಗಲಿ, ಮಗಳಾಗಲಿ ಒಂದು ರೂಪಾಯಿ ಹಣವನ್ನೂ ಪಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ನಾನು ಹಿತಾಸಕ್ತಿ ಸಂಘರ್ಷದಲ್ಲಿ ತೊಡಗಿಲ್ಲ ಎಂದು ನುಡಿದ ಅವರು, ಪಿ.ಚಿದಂಬರಂ ಅವರು ವಿತ್ತ ಸಚಿವರಾಗಿದ್ದಾಗ ಅವರ ಪತ್ನಿ ನಳಿನಿ ಚಿದಂಬರಂ ಅವರು ಶಾರದ ಚಿಟ್ ಫಂಡ್ ಹಗರಣದ ವಕೀಲೆಯಾಗಿದ್ದರು. ಇದು ಹಿತಾಸಕ್ತಿ ಸಂಘರ್ಷವಾಗಿರಲಿಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top