ಮಂಗಳೂರು: ಮಂಗಳೂರು ಲಿಟ್ ಫೆಸ್ಟ್ ನ ಮೂರನೆಯ ಆವೃತ್ತಿ ಮಂಗಳೂರಿನ ಓಷಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ಇಂದು ಆರಂಭಗೊಂಡಿದೆ. ಕೊರೋನಾ ಮುಂಜಾಗ್ರತಾ ಕ್ರಮಗಳೊಂದಿಗೆ ಲಿಟ್ ಫೆಸ್ಟ್ ಅನ್ನು ಆಯೋಜನೆ ಮಾಡಲಾಗಿದೆ.
ಖ್ಯಾತ ವಾಗ್ಮಿ ಶಕ್ತಿ ಸಿನ್ಹಾ ಮತ್ತು ಪ್ರಸನ್ನ ಎಂ.ಆರ್ ಮಂಗಳೂರು ಲಿಟ್ ಫೆಸ್ಟ್ಗೆ ಚಾಲನೆ ನೀಡಿದರು. ಈ ಲಿಟ್ ಫೆಸ್ಟ್ ʼReimagining the Idea of Bharat’ ಎಂಬ ವಿಷಯವನ್ನಾಧರಿಸಿ ನಡೆಯುತ್ತಿದೆ.
ಎರಡು ದಿನಗಳ ಕಾಲ ಆಯೋಜನೆಗೊಳ್ಳುತ್ತಿದ್ದ ಲಿಟ್ ಫೆಸ್ಟ್ ಅನ್ನು ಈ ಬಾರಿ ಕೊರೋನಾ ಕಾರಣದಿಂದ ಒಂದೇ ದಿನಕ್ಕೆ ಸೀಮಿತಗೊಳಿಸಲಾಗಿದೆ.
ಈ ಬಾರಿಯ ಲಿಟ್ ಫೆಸ್ಟ್ ನಲ್ಲಿ 6 ಅವಧಿಗಳ ವಿಚಾರ ಸಂಕಿರಣ ನಡೆಯಲಿದ್ದು ಸುಮಾರು 200 ಮಂದಿ ಪಾಲ್ಗೊಂಡಿದ್ದಾರೆ.
ವಿಚಾರ ಸಂಕಿರಣದಲ್ಲಿ ವಾಗ್ಮಿಗಳಾದ ವಿಕ್ರಂ ಸೂದ್, ಶಕ್ತಿ ಸಿನ್ಹಾ, ಪ್ರೊ.ಮಾಧವ ನಲ್ಪಾಟ್, ಮಂಗಳ ಸಿದ್ದಿ, ವಿಕ್ರಂ ಸಂಪತ್, ಶೇಶಾದ್ರಿ ಚಾರಿ, ಸುನಿಲ್ ಪುರಾಣಿಕ್, ಸುಚೇಂದ್ರ ಪ್ರಸಾದ್, ಡಾ ಬಿ ವಿ ವಸಂತ್ ಕುಮಾರ್, ರೋಹಿತ್ ಚಕ್ರತೀರ್ಥ ಮುಂತಾದವರು ಭಾಗವಹಿಸಿ ವಿಚಾರ ಮಂಡಿಸಲಿದ್ದಾರೆ.
ಭಾರತೀಯ ಗ್ರಂಥಗಳಲ್ಲಿನ ಪ್ರಾಚೀನ ಐತಿಹಾಸಿಕ ದೃಷ್ಟಿಕೋನವನ್ನು ಬೌದ್ಧಿಕ ಪ್ರವಚನದ ಮೂಲಕ ಜಗತ್ತಿನಾದ್ಯಂತ ಪಸರಿಸುವ ಉದ್ದೇಶವನ್ನು ಈ ಲಿಟ್ ಫೆಸ್ಟ್ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.