ಮುಂಬಯಿ: ಹಣ ಮರದಲ್ಲಿ ಬೆಳೆಯೋದಿಲ್ಲ ಎಂಬುದು ನಿಜ, ಆದರೆ ಸಮುದ್ರದಲ್ಲಿ ತೇಲಿಕೊಂಡು ಬರುತ್ತದೆ! ಎಂದರೆ ನೀವು ನಂಬುತ್ತೀರಾ? ನಂಬಲೇ ಬೇಕು. ಏಕೆಂದರೆ ಮುಂಬಯಿಯ ಗೇಟ್ ವೇ ಆಫ್ ಇಂಡಿಯಾದ ಸಮುದ್ರದಲ್ಲಿ 1 ಸಾವಿರದ ಹಲವು ನೊಟುಗಳು ತೇಲಿಕೊಂಡು ಬರುತ್ತಿದೆ. ಇದನ್ನು ಹಿಡಿಯಲು ಜನ ಎದ್ದೋ ಬಿದ್ದೋ ಓಡುತ್ತಿದ್ದಾರೆ.
ಈ ಹಣ ಎಲ್ಲಿಂದ, ಹೇಗೆ ಬಂತು ಎಂಬುದು ಯಾರಿಗೂ ತಿಳಿದಿಲ್ಲ, ಆದರೆ ಹಣ ನೀರಿನಲ್ಲಿ ತೇಲಿ ಬರುತ್ತಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಜನರು ಭಯಾನಕ ಅಲೆಗಳನ್ನೂ ಗಮನಿಸದೆ ಹಣ ತೆಗೆಯಲು ಓಡಿದ್ದಾರೆ.
ಬಳಿಕ ಪೊಲೀಸರು ಸ್ಥಳಕ್ಕಾಗಮಿಸಿ ಜನರನ್ನು ತಡೆದಿದ್ದಾರೆ. ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಹಣದ ಆಸೆಗೆ ಜನ ಸಮುದ್ರ ಅಲೆಗಳಿಗೆ ಸಿಕ್ಕು ಜೀವ ಕಳೆದುಕೊಳ್ಳದಂತೆ ಎಚ್ಚರಿಕೆ ವಹಿಸಿದ್ದಾರೆ.
ಶ್ರೀಮಂತ ವ್ಯಕ್ತಿಯೊಬ್ಬ ಸಮುದ್ರದ ಆಚೆ ಬದಿಯಲ್ಲಿ ನಿಂತು ಸಾವಿರರ ನೋಟಿ ಕಂತೆಗಳನ್ನು ನೀರಿಗೆ ಬೀಸಾಕಿದ ಎಂಬ ವದಂತಿಗಳು ಹರಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.