ಮೈಸೂರು: ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ತಮಿಳುನಾಡಿನ ಚೆನ್ನೈಗೆ ಮಾರ್ಚ್ 29 ರಿಂದ ತೊಡಗಿದಂತೆ ಹೊಸ ವಿಮಾನ ಹಾರಾಟ ಆರಂಭವಾಗಲಿದೆ.
ಈಗಾಗಲೇ ಮೈಸೂರು – ಚೆನ್ನೈ ನಡುವೆ ಸಂಚರಿಸುತ್ತಿರುವ ವಿಮಾನಗಳ ಸಾಲಿಗೆ ಇಂಡಿಗೋ ವಿಮಾನ ಸೇರ್ಪಡೆಯಾಗಲಿದ್ದು, ಮಾರ್ಚ್ 29 ರಿಂದ ತೊಡಗಿದಂತೆ ಹಾರಾಟ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಈ ಎರಡು ನಗರಗಳ ನಡುವೆ ಟ್ರು ಜೆಟ್ ಏರ್ಲೈನ್ಸ್ ವಿಮಾನ ಹಾರಾಟ ನಡೆಸುತ್ತಿದೆ.
ಈ ತಿಂಗಳ 29 ರಿಂದ ಸೇವೆ ಆರಂಭ ಮಾಡಲಿರುವ ಇಂಡಿಗೋ ಏರ್ಲೈನ್ಸ್ ವಾರದಲ್ಲಿ 3 ದಿನಗಳಲ್ಲಿ ಸೇವೆ ನೀಡಲಿದೆ. ಸೋಮವಾರ, ಬುಧವಾರ ಮತ್ತು ಶುಕ್ರವಾರ ಇಂಡಿಗೋ ಪ್ರಯಾಣಿಕರಿಗೆ ಸೇವೆ ಒದಗಿಸಲಿದೆ. ಈ ವಿಮಾನ ಸಂಜೆ 4.35 ಗೆ ಮೈಸೂರಿನಿಂದ ಪ್ರಯಾಣ ಆರಂಭಿಸಿ 5.55 ಕ್ಕೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ. ಚೆನ್ನೈನಿಂದ ಮಧ್ಯಾಹ್ನ 2.50 ರ ಸುಮಾರಿಗೆ ಹಾರಾಟ ಆರಂಭಿಸಲಿರುವ ಈ ವಿಮಾನ 4.15 ರ ವೇಳೆಗೆ ಮೈಸೂರು ತಲುಪಲಿದೆ. ಕೇಂದ್ರ ಸರ್ಕಾರದ ಉಡಾನ್ ಆರ್ಸಿಎಸ್ ಯೋಜನೆಯಡಿ ಈ ವಿಮಾನ ಹಾರಾಟ ನಡೆಸಲಿದೆ ಎಂದು ಮೂಲಗಳು ಹೇಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.