ನವದೆಹಲಿ: ಏರ್ ಇಂಡಿಯಾವು ತನ್ನ ದೇಶಿಯ ವಿಮಾನಗಳ ಉಚಿತ ಬ್ಯಾಗೇಜ್ ಪ್ರಮಾಣವನ್ನು 10 ಕೆ.ಜಿ.ಯಿಂದ 25 ಕೆ.ಜಿ.ಗೆ ಹೆಚ್ಚಿಸಿದೆ. ಇದರ ಜೊತೆಗೆ ಮಕ್ಕಳ 10 ಕೆ.ಜಿ. ಬ್ಯಾಗೇಜ್ಗೆ ಉಚಿತ ಅವಕಾಶ ಕಲ್ಪಿಸಿದೆ. ಈ ಸೌಲಭ್ಯವನ್ನು ಆ.12ರಿಂದ ಜಾರಿಗೊಳಿಸಲಾಗುತ್ತಿದ್ದು, ಫೆ.7, 2016ರ ವರೆಗೆ ಇರಲಿದೆ.
ಭಾರತೀಯ ವಿಮಾನಯಾನ ನಿರ್ದೇಶನಾಲಯವು ದೇಶೀಯ ಪ್ರಯಾಣಿಕರಿಗೆ 15 ಕೆ.ಜಿ.ಯಷ್ಟು ಬ್ಯಾಗೇಜ್ನ್ನು ಉಚಿತವಾಗಿ ಕಲ್ಪಿಸಲು ಆದೇಶ ನೀಡಿತ್ತು. ಹಲವು ವಿಮಾನಯಾನಗಳು ಬ್ಯಾಗೇಜ್ಗೆ ಶುಲ್ಕ ವಿಧಿಸಲು ಆಸಕ್ತಿ ತೋರುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.