ನವದೆಹಲಿ: ಸಂಸತ್ತಿನಲ್ಲಿ ಕಲಾಪಕ್ಕೆ ನಿರಂತರ ಅಡ್ಡಿಗಳು ಉಂಟು ಮಾಡುತ್ತಿರುವುದನ್ನು ವಿರೋಧಿಸಿ, ಸುಗಮ ಕಲಾಪಕ್ಕೆ ಅನುವು ಮಾಡಿಕೊಡುವಂತೆ ನಾಯಕರನ್ನು ಒತ್ತಾಯಿಸಿ ಇಂಡಿಯಾ ಇಂಕ್ ಆನ್ಲೈನ್ ಪಿಟಿಷನ್ ಗೆ ಸಹಿ ಸಂಗ್ರಹ ಮಾಡಿದೆ.
ಖ್ಯಾತ ಉದ್ಯಮಿಗಳು ಸೇರಿದಂತೆ 15 ಸಾವಿರ ಜನರು ಈ ಪಿಟಿಷನ್ಗೆ ಸಹಿ ಹಾಕಿದ್ದಾರೆ. ‘ನಾನು ಟ್ಯಾಕ್ಸ್ ಪೇಯರ್, ನಾನು ಶ್ರಮಪಟ್ಟು ದುಡಿದ ಹಣ ಸಂಸತ್ತು ಕಲಾಪಕ್ಕೆ ವ್ಯಯವಾಗುತ್ತಿದೆ. ಜಿಎಸ್ಟಿ ಬಿಲ್ಲನ್ನು ಸಂಸತ್ತು ಮುಗಿಯುದರೊಳಗೆ ಅನುಮೋದನೆಗೊಳಿಸಿ. ತನ್ನ ಹಣ ಪೋಲಾಗುತ್ತಿರುವುದಕ್ಕೆ ಜನ ಸಾಮಾನ್ಯ ವೇದನೆ ಪಟ್ಟುಕೊಳ್ಳುತ್ತಿದ್ದಾನೆ. ಜಿಎಸ್ಟಿ ಈ ದೇಶಕ್ಕೆ ಅತ್ಯಗತ್ಯವಾಗಿ ಬೇಕಾದ ಸುಧಾರಣೆ’ ಎಂದು ಪಿಟಿಷನ್ನಲ್ಲಿ ಹೇಳಲಾಗಿದೆ.
ಸಂಸತ್ತಿನಲ್ಲಿ ಕಲಾಪ ನಡೆಯಲು, ಚರ್ಚೆಗೆ ಅನುವು ಮಾಡಿಕೊಡುವಂತೆ ಪ್ರತಿಪಕ್ಷಗಳ ನಾಯಕರನ್ನು ಇದರಲ್ಲಿ ಕೋರಲಾಗಿದೆ.
ಈ ಪಿಟಿಷನ್ಗೆ ಕಿರಣ್ ಮಜೂಂದಾರ್, ಆದಿ ಗೋದ್ರೇಜ್, ಪವಣ್ ಮುಂಜಲ್, ಕ್ರಿಸ್ ಗೋಪಾಲಕೃಷ್ಣನ್ ಸೇರಿದಂತೆ 15 ಸಾವಿರ ಮಂದಿ ಸಹಿ ಹಾಕಿದ್ದಾರೆ.
ಪ್ರತಿಪಕ್ಷಗಳು ಪ್ರತಿದಿನ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸುವಂತಿಲ್ಲ. ಅವರಿಗೆ ದೇಶದ ಪ್ರಗತಿ ಇಷ್ಟವಿಲ್ಲ ಎಂದು ಇದರಿಂದ ತಿಳಿಯುತ್ತದೆ ಎಂದು ಕಿರಣ್ ಮಜೂಂದಾರ್ ಅಭಿಪ್ರಾಯಪಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.