ನವದೆಹಲಿ: ಕಂಪನಿಯ ನೀತಿಗಳನ್ನು ಉಲ್ಲಂಘಿಸಿದಕ್ಕಾಗಿ ಸುಮಾರು 3.1 ಬಿಲಿಯನ್ ಜಾಹೀರಾತುಗಳನ್ನು ನಿರ್ಬಂಧಿಸಿದೆ.
2020 ರ ಸಾಲಿನಲ್ಲಿ 99 ದಶಲಕ್ಷಕ್ಕೂ ಹೆಚ್ಚು ಕೋವಿಡ್ ಸಂಬಂಧಿತ ಜಾಹೀರಾತುಗಳನ್ನು ಗೂಗಲ್ ತೆಗೆದು ಹಾಕಿದೆ. ಅವುಗಳಲ್ಲಿ ಪವಾಡ ಪರಿಹಾರಗಳು, ಎನ್ 95 ಮುಖವಾಡಗಳು ಮತ್ತು ನಕಲಿ ಲಸಿಕೆಗಳ ಬಗ್ಗೆ ಜಾಹೀರಾತುಗಳು ಸೇರಿವೆ. ಈ ಹಿಂದೆ ಗೂಗಲ್ ಈ ಮಾಹಿತಿಗಳನ್ನು ಎಲ್ಲಿಯೂ ಹಂಚಿಕೊಳ್ಳಲು ಬಯಸಿರಲಿಲ್ಲ, ಆದರೆ ಈ ಬಾರಿ ಮಾಹಿತಿಯನ್ನು ಹಂಚಿಕೊಂಡಿದೆ.
ಕೋವಿಡ್ ಸಂದರ್ಭ ಹೆಚ್ಚು ಜನರು ಆನ್ಲೈನ್ನಲ್ಲಿ ಹೆಚ್ಚಾಗಿ ತೊಡಗಿಸಿಕೊಂಡದ್ದರಿಂದ ಬಳಕೆದಾರರನ್ನು ದಾರಿ ತಪ್ಪಿಸುವಂತಹ ಜಾಹೀರಾತನ್ನು ಗೂಗಲ್ ಪತ್ತೆಹಚ್ಚಿದೆ. ಹೀಗಾಗಿ ಈ ನಿರ್ಬಂಧ ಕ್ರಮವನ್ನು ಕೈಗೊಂಡಿದೆ ಎಂದು ತಿಳಿಸಿದೆ. ಈ ರೀತಿ ಜನರನ್ನು ಮೋಸ ಗೊಳಿಸುತ್ತಿದ್ದ ಅನೇಕ ಜಾಹೀರಾತುಗಳನ್ನು ಪತ್ತೆ ಹಚ್ಚಿ ಒಟ್ಟು 1.7 ಮಿಲಿಯನ್ ಜಾಹೀರಾತು ಖಾತೆಗಳನ್ನು ನಿಷ್ಕ್ರಿಯಗೊಳಿಸುವಲ್ಲಿ ಗೂಗಲ್ ಯಶಸ್ವಿಯಾಗಿದೆ. ಗೂಗಲ್ ನಿಯಮಗಳ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದ ಒಟ್ಟು 101 ಮಿಲಿಯನ್ ಜಾಹೀರಾತುಗಳನ್ನು ತೆಗೆದುಹಾಕಿದೆ ಎಂದು ಗೂಗಲ್ ಪ್ರಕಟಣೆಯಲ್ಲಿ ತಿಳಿಸಿದೆ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.