ಬೆಂಗಳೂರು: ಮುಂದಿನ ಒಂದು ವಾರದೊಳಗಾಗಿ ರಾಜ್ಯದಲ್ಲಿ ಭೂ ಪರಿವರ್ತನೆ ಮಂಜೂರಾತಿ ನಿಯಮಗಳನ್ನು ಬದಲಿಸಲಾಗುತ್ತದೆ ಎಂದು ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಕಳೆದ 5 ವರ್ಷಗಳಲ್ಲಿ ಭೂ ಸಮೀಕ್ಷೆಗಾಗಿ 11 ಇ ನಕ್ಷೆ, ಭೂ ಪರಿವರ್ತನೆ ನಕ್ಷೆ, ಹದ್ದುಬಸ್ತು, ತತ್ಕಾಲ್, ಭೂ ಸ್ವಾಧೀನ, ಜೆಎಂಸಿ ನಕ್ಷೆ ಮೊದಲಾದವುಗಳನ್ನು ಕೋರಿ ಸುಮಾರು 36,79,331 ಅರ್ಜಿಗಳು ಬಂದಿವೆ. ಅವುಗಳಲ್ಲಿ 95% ಅರ್ಜಿಗಳು ವಿಲೇವಾರಿಯಾಗಿವೆ. ಹಲವು ಕಾರಣಗಳಿಂದಾಗಿ ಕೆಲವು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಪಹಣಿ, ವಿಸ್ತೀರ್ಣ ಕಾಲಂ ಗಳಲ್ಲಿ ವ್ಯತ್ಯಾಸ, ಶಿಥಿಲವಾಗಿರುವ ದಾಖಲೆಗಳು, ಭೂ ಮಂಜೂರಾತಿ ವೇಳೆ ಕೆಲವು ಕಡೆಗಲಲ್ಲಿ ನಕಲಿ ದಾಖಲೆ ವಿತರಣೆ, ಫಲಾನುಭವಿಗಳ ಬಳಿ ದಾಖಲೆಗಳಿದ್ದರೂ ತಾಲ್ಲೂಕು ಕಚೇರಿಗಳಲ್ಲಿ ದಾಖಲೆಗಳಿಲ್ಲದೇ ಇರುವುದು ಮೊದಲಾದ ಕಾರಣಗಳಿಂದ ಪೋಡಿ ವಿಳಂಬವಾಗುತ್ತಿದೆ. ಈ ವಿಚಾರದಲ್ಲಿ ತಪ್ಪಿತಸ್ಥರಾಗಿರುವ ಅಧಿಕಾರಿಗಳು ಸದ್ಯ ನಿವೃತ್ತರಾಗಿದ್ದರೂ ಸಹ ಅವರ ಮೇಲೆ ಸರ್ಕಾರ ಕ್ರಮ ಜರುಗಿಸಲಿದೆ. ಸರ್ವೇ ನಡೆಸಲು 2000 ಜನರನ್ನು ನೇಮಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.