ಕಲ್ಬುರ್ಗಿ: ಮಾ. 25 ರಿಂದ ಆರಂಭವಾಗುವಂತೆ ಕಲ್ಬುರ್ಗಿ ಮತ್ತು ಮುಂಬೈ ನಡುವೆ ವಾರದ ಎಲ್ಲಾ ದಿನಗಳಲ್ಲಿಯೂ ವಿಮಾನ ಸಂಚಾರವನ್ನು ಆರಂಭ ಮಾಡಲಿರುವುದಾಗಿ ಏರ್ ಇಂಡಿಯಾದ ಅಂಗಸಂಸ್ಥೆ ಅಲಯನ್ಸ್ ಏರ್ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಮಾರ್ಚ್ 18 ರಿಂದ ತೊಡಗಿದಂತೆ ವಿಮಾನ ಸಂಚಾರಕ್ಕೆ ಟಿಕೇಟ್ ಕಾಯ್ದಿರಿಸಲು ಅವಕಾಶ ನೀಡಲಾಗಿದೆ. ಮಾ. 25 ರಿಂದ ತೊಡಗಿದಂತೆ ಪ್ರತಿ ದಿನ ಬೆಳಗ್ಗೆ 7.20 ಮುಂಬೈ ನಗರದಿಂದ ಈ ವಿಮಾನ ಯಾನ ಆರಂಭಿಸಲಿದ್ದು, ಕಲ್ಬುರ್ಗಿಗೆ ಬೆಳಗ್ಗೆ 9 ರ ವೇಳೆಗೆ ಬಂದಿಳಿಯಲಿದೆ. 70 ಸೀಟುಗಳನ್ನು ಈ ವಿಮಾನ ಹೊಂದಿರಲಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
ಹಾಗೆಯೇ, ಬೆಳಗ್ಗೆ 9.25 ಕ್ಕೆ ಕಲ್ಬುರ್ಗಿಯಿಂದ ಮತ್ತೆ ಪ್ರಯಾಣಿಕರನ್ನು ಹೊತ್ತು ಸಾಗಲಿರುವ ಈ ವಿಮಾನ ಬೆಳಗ್ಗೆ 10.55 ರ ಸುಮಾರಿಗೆ ಮುಂಬೈ ತಲುಪಲಿದೆ. ಈ ವಿಮಾನದಲ್ಲಿ ಪ್ರಯಾಣಿಸಲು ಬುಕ್ಕಿಂಗ್ ಮಾಡುವುದಕ್ಕಾಗಿ www.airindia.in ವೆಬ್ಸೈಟ್ ಅನ್ನು ಸಂಪರ್ಕಿಸುವಂತೆ ಸಂಸ್ಥೆ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.