ಬೆಂಗಳೂರು: ನಗರದಲ್ಲಿ ಪ್ರಸ್ತುತ ನಮಗೆ ಸಾವಿರಾರು ಟ್ರಾಫಿಕ್ ಸಿಗ್ನಲ್ಗಳು ಕಣ್ಣಿಗೆ ಕಾಣುತ್ತವೆ. ಆದರೆ ಕಳೆದ 58 ವರ್ಷಗಳ ಹಿಂದೆ ಬೆಂಗಳೂರು ನಗರದಲ್ಲಿ ಕೇವಲ ಒಂದೇ ಒಂದು ಟ್ರಾಫಿಕ್ ಸಿಗ್ನಲ್ ಇತ್ತು. ಈ ಸಿಗ್ನಲ್ ನ ಸ್ಮರಣಾರ್ಥ ಇಂದು ಅದೇ ಸಿಗ್ನಲ್ನಲ್ಲಿ ಶಿಲಾ ಫಲಕವನ್ನು ಅಳವಡಿಸಿ, ಅದರ ಐಹಿತ್ಯವನ್ನು ಸಾರ್ವಜನಿಕರಿಗೆ ತಿಳಿಸಿಕೊಡುವ ಸಲುವಾಗಿ ಬೆಂಗಳೂರು ಸಂಚಾರಿ ಪೊಲೀಸರು ಮುಂದಾಗಿದ್ದಾರೆ.
1963 ರಲ್ಲಿ ಬೆಂಗಳೂರಿನ ಬಿಬಿಎಂಪಿ ಕಚೇರಿ ಬಳಿಯ ಎನ್ ಆರ್ ಜಂಕ್ಷನ್ ನಲ್ಲಿ ಪ್ರಪ್ರಥಮ ಟ್ರಾಫಿಕ್ ಸಿಗ್ನಲ್ ಸ್ಥಾಪಿಸಲಾಗಿತ್ತು. ಆ ಸಮಯದಲ್ಲಿ ಆ ಟ್ರಾಫಿಕ್ ಸಿಗ್ನಲ್ ಅನ್ನು ಬೆಂಗಳೂರಿನ ಪ್ರಪ್ರಥಮ ಪೊಲೀಸ್ ಆಯುಕ್ತ ಸಿ ಚಾಂಡಿ, ಅಂದಿನ ಉಪ ಪೊಲೀಸ್ ಆಯುಕ್ತ ಬಿ ಎನ್ ಗರುಡಾಚಾರ್ ಅವರ ಸಮ್ಮುಖದಲ್ಲಿ ಲೋಕಾರ್ಪಣೆ ಮಾಡಲಾಗಿತ್ತು. ಇಂದು ಶಿಲಾಫಲಕವನ್ನು ಅಂದು ಉದ್ಘಾಟನೆ ಮಾಡಿದ್ದ ಗರುಡಾಚಾರ್ ಅವರ ಸಮ್ಮುಖದಲ್ಲಿಯೇ ಅನಾವರಣ ಮಾಡಲಾಗಿದೆ. ಕಳೆದ 58 ವರ್ಷಗಳಲ್ಲಿ ನಗರದ ಸುಮಾರು 353 ಸ್ಥಳಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ.
ಈ ಸಂದರ್ಭದಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಬಿ ಆರ್ ರವಿಕಾಂತೇ ಗೌಡ, ಗರುಡಾಚಾರ್ ಅವರ ಪುತ್ರ, ಶಾಸಕ ಉದಯ್ ಗರುಡಾಚಾರ್ ಅವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಗರುಡಾಚಾರ್ ಅವರನ್ನು ಸನ್ಮಾನಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.