ಬೆಂಗಳೂರು: ಹೂಡಿಕೆ ಮತ್ತು ಉದ್ಯಮಗಳಿಗೆ ಕರ್ನಾಟಕ ನಂ.1 ಆದ್ಯತೆಯ ತಾಣವಾಗಿ ಮುಂದುವರೆದಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ.
2020ರ ಜನವರಿಯಿಂದ ಡಿಸೆಂಬರ್ ವರೆಗೆ ಸುಮಾರು 1.6 ಲಕ್ಷ ಕೋಟಿ ಹೂಡಿಕೆ ಪ್ರಸ್ತಾವನೆಗಳೊಂದಿಗೆ ದೇಶದ ಒಟ್ಟು ಹೂಡಿಕೆ ಪ್ರಸ್ತಾವಗಳ ಶೇ 39% ರಷ್ಟನ್ನು ಕರ್ನಾಟಕ ಆಕರ್ಷಿಸಿದೆ. ಆ ಮೂಲಕ ಹೂಡಿಕೆಗಳಿಗೆ ಸಂಬಂಧಿಸಿದಂತೆ ದೇಶದಲ್ಲಿಯೇ ನಂ. 1 ಸ್ಥಾನವನ್ನು ಉಳಿಸಿಕೊಂಡಿದೆ. ವಿದೇಶೀ ನೇರ ಹೂಡಿಕೆಗಳಿಗೆ ಸಂಬಂಧಿಸಿದಂತೆ ರಾಜ್ಯ ಮೂರನೇ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದ್ದಾರೆ.
2019 ನೇ ವರ್ಷಕ್ಕೆ ಹೋಲಿಸಿದರೆ 2020 ರಲ್ಲಿ ಕೈಗಾರಿಕೆ, ಉದ್ಯಮಗಳಲ್ಲಿನ ಹೂಡಿಕೆ ದ್ವಿಗುಣವಾಗಿದೆ. 2019 ರಲ್ಲಿ ಕರ್ನಾಟಕ 83,492 ಕೋಟಿ ರೂ.ಗಳ ಹೂಡಿಕೆ ಪ್ರಸ್ತಾಪಗಳನ್ನು ಆಕರ್ಷಿಸಿತ್ತು. ಆದರೆ 2020 ರಲ್ಲಿ 1.6 ಲಕ್ಷ ಕೋಟಿ ಹೂಡಿಕೆಗಳನ್ನು ಸೆಳೆದಿದೆ ಎಂದು ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ಕರ್ನಾಟಕವು ಮತ್ತಷ್ಟು ಹೂಡಿಕೆಗಳನ್ನು ಆಕರ್ಷಿಸಲಿದೆ ಎಂಬುದಾಗಿಯೂ ಮುಖ್ಯಮಂರಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.
ಹೂಡಿಕೆ ಮತ್ತು ಉದ್ಯಮಗಳಿಗೆ ಕರ್ನಾಟಕ ನಂ.1 ಆದ್ಯತೆಯ ತಾಣವಾಗಿ ಮುಂದುವರೆದಿದೆ. 2020ರ ಜನವರಿಯಿಂದ ಡಿಸೆಂಬರ್ ವರೆಗೆ, ಸುಮಾರು 1.6 ಲಕ್ಷ ಕೋಟಿ ಹೂಡಿಕೆ ಪ್ರಸ್ತಾವನೆಗಳೊಂದಿಗೆ ದೇಶದ ಒಟ್ಟು ಹೂಡಿಕೆ ಪ್ರಸ್ತಾವಗಳ ಶೇ 39% ರಷ್ಟನ್ನು ಕರ್ನಾಟಕ ಆಕರ್ಷಿಸಿದೆ.#GrowWithKarnataka @PMOIndia @DIPPGOI pic.twitter.com/rFlu6VvL4P
— CM of Karnataka (@CMofKarnataka) March 15, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.