ಹುಬ್ಬಳ್ಳಿ: ಉತ್ತರ ಕರ್ನಾಟಕ ಭಾಗದ ವ್ಯಾಪಾರಿಗಳ ಅನುಕೂಲದ ದೃಷ್ಟಿಯಿಂದ ಹುಬ್ಬಳ್ಳಿ ವಿಮಾನ ನಿಲ್ದಾಣದ ನಿಯಂತ್ರಕ ಪ್ರಾಧಿಕಾರದ ಬ್ಯೂರೋ ಆಫ್ ಸಿವಿಲ್ ಏವಿಯೇಶನ್ ಸೆಕ್ಯೂರಿಟಿ ಅನುಮೋದನೆಯೊಂದಿಗೆ, ಪ್ರಯಾಣಿಕರ ಟರ್ಮಿನಲ್ ಕಟ್ಟಡದಿಂದ ಸರಕುಗಳ ಹೊರ ಸಾಗಾಟ ಮತ್ತು ಹೊರಗಿನಿಂದ ತರಿಸಿಕೊಳ್ಳುವ ಸೇವೆಯನ್ನು ಆರಂಭ ಮಾಡಲಾಗಿದೆ.
ಈ ಹಿಂದೆ ಸರಕುಗಳನ್ನು ತರಿಸಿಕೊಳ್ಳುವ ಸೇವೆ ನೀಡಲಾಗುತ್ತಿತ್ತು. ಆದರೆ ಇತರೆಡೆಗೆ ಕಳುಹಿಸುವ ವ್ಯವಸ್ಥೆ ಇರಲಿಲ್ಲ. ಇದೀಗ ಈ ಸೇವೆಯನ್ನೂ ಆರಂಭ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಒದಗಿಸಲಾಗಿದೆ.
ಈ ಸಂಬಂಧ ಮಾತನಾಡಿರುವ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ್ ಕುಮಾರ್ ಠಾಕ್ರೆ, ಉತ್ತರ ಕರ್ನಾಟಕದ ಮೊಟ್ಟ ಮೊದಲ ಮೀಸಲು ದೇಶೀಯ ವಾಯು ಸರಕು ಸೇವೆಗಳ ಟರ್ಮಿನಲ್ ಕಾರ್ಯ ಈಗಾಗಲೇ ಸಂಪೂರ್ಣವಾಗಿದೆ. ಮಾರ್ಚ್ 17 ರಂದು ಈ ಟರ್ಮಿನಲ್ನ ಅಂತಿಮ ತಪಾಸಣೆ ನಡೆಯಲಿದೆ. ಎಪ್ರಿಲ್ನಲ್ಲಿ ಸರಕು ಸಾಗಾಟಕ್ಕೆ ಅನುಮೋದನೆ ನಿರೀಕ್ಷೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಈಗಾಗಲೇ ಹುಬ್ಬಳ್ಳಿಯಿಂದ ದೇಶದ ಪ್ರಮುಖ ಕೈಗಾರಿಕಾ ಕೇಂದ್ರಗಳೆಂದು ಪ್ರಸಿದ್ಧಿ ಪಡೆದಿರುವ ಮುಂಬೈ, ಚೆನ್ನೈ ಮತ್ತು ಬೆಂಗಳೂರುಗಳ ಜೊತೆಗೆ ವೈಮಾನಿಕ ಸಂಪರ್ಕ ಹೊಂದಿದ್ದು, ಇದು ಸರಕು ಸಾಗಾಟದ ದೃಷ್ಟಿಯಿಂದಲೂ ಪ್ರಾಮುಖ್ಯತೆ ಪಡೆಯಲಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.