ಬೆಂಗಳೂರು: ಕರ್ನಾಟಕದ ಹೆಮ್ಮೆಯ ಓಟಗಾರ್ತಿ ಎಂಆರ್ ಪೂವಮ್ಮ ಅವರು ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಅತೀವ ಸಂತಸ ವ್ಯಕ್ತಪಡಿಸಿರುವ ಅವರು, ಇದು ನನಗೆ ಹೆಮ್ಮೆಯ ಸಂಗತಿಯಾಗಿದೆ ಎಂದಿದ್ದಾರೆ.
ನಾನು ಸಂತೋಷಗೊಂಡಿದ್ದೇನೆ, ಇದು ನನಗೆ ಹೆಮ್ಮೆಯ ಸಂಗತಿ. ಒಲಿಂಪಿಕ್ ಮತ್ತು ಏಷ್ಯನ್ ಗೇಮ್ಸ್ನಲ್ಲಿ ಪಾಲ್ಗೊಳ್ಳಬೇಕು ಎಂಬುದು ನನ್ನ ಗುರಿಯಾಗಿತ್ತು, ಇದೀಗ ಅದೆಲ್ಲವೂ ಸಾಧ್ಯವಾಗುತ್ತಿದೆ, ನನ್ನ ಪರಿಶ್ರಮಕ್ಕೆ, ನನ್ನ ಕೋಚ್ಗೆ ಧನ್ಯವಾದಗಳು’ ಎಂದು ಪೂವಮ್ಮ ಭಾವುಕರಾಗಿ ನುಡಿದಿದ್ದಾರೆ.
ಕ್ರೀಡಾ ಸಚಿವಾಲಯ ಅವರ ಹೆಸರನ್ನು ಅರ್ಜುನ ಪ್ರಶಸ್ತಿಗೆ ಮಂಗಳವಾರ ಶಿಫಾರಸ್ಸು ಮಾಡಿದೆ. ಪೂವಮ್ಮ ಅವರು ಚೀನಾದಲ್ಲಿ ನಡೆದ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ ರಿಲೇಯಲ್ಲಿ ಭಾರತ ಚಿನ್ನದ ಪದಕ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಪ್ರಸ್ತುತ ಅವರು ವರ್ಲ್ಡ್ ಅಥ್ಲೇಟಿಕ್ ಚಾಂಪಿಯನ್ಶಿಪ್ ಮತ್ತು ಒಲಿಂಪಿಕ್ ಗೇಮ್ಸ್ಗೆ ಸಜ್ಜಾಗುತ್ತಿದ್ದು, ಕೋಚ್ ಕುನ್ಹಿ ಮೊಹಮ್ಮದ್ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.
2014ರ ಏಷ್ಯನ್ ಪ್ಯಾರ ಗೇಮ್ಸ್ನಲ್ಲಿ ಆರು ಪದಕಗಳನ್ನು ಗೆದ್ದಿರುವ ಶರತ್ ಗಾಯಕ್ವಾಡ್ ಅವರಿಗೂ ಅರ್ಜುನ ಪ್ರಶಸ್ತಿ ಲಭಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.