ಲಂಡನ್: ಇರಾಕ್, ಸಿರಿಯಾ ಸೇರಿದಂತೆ ಅನೇಕ ಪ್ರದೇಶಗಳನ್ನೊಳಗೊಂಡ ಪ್ರತ್ಯೇಕ ಇಸ್ಲಾಮಿಕ್ ರಾಷ್ಟ್ರವನ್ನು ಸ್ಥಾಪನೆ ಮಾಡಬೇಕು ಎಂಬ ಗುರಿಯೊಂದಿಗೆ ಇಸಿಸ್ ಸಂಘಟನೆ ನಿರಂತರ ಅಮಾನವೀಯ ಹೋರಾಟವನ್ನು ನಡೆಸುತ್ತಿದೆ.
ಆಘಾತಕಾರಿ ವಿಷಯವೆಂದರೆ, ಇವರು ರಚಿಸಲು ಹೊರಟಿರುವ ಇಸ್ಲಾಮಿಕ್ ರಾಷ್ಟ್ರ ಭಾರತದ ಬಹುತೇಕ ಎಲ್ಲಾ ಭೂಭಾಗಗಳನ್ನೂ ಒಳಗೊಂಡಿದೆ. ಈ ಸಂಘಟನೆಯ ಭೂಪಟದಲ್ಲಿ ಭಾರತವೂ ಇದ್ದು, ಮುಂದಿನ ಐದು ವರ್ಷದಲ್ಲಿ ಇಸ್ಲಾಮಿಕ್ ರಾಷ್ಟ್ರ ಖಲಿಫತನ್ನು ನಿರ್ಮಿಸುವ ಗುರಿಯನ್ನು ಇವರು ಹೊಂದಿದ್ದಾರೆ.
ಮಧ್ಯಪೂರ್ವ, ಉತ್ತರ ಆಫ್ರಿಕಾ, ಭಾರತದ ಬಹುತೇಕ ಭೂಭಾಗ, ಯುರೋಪ್ನ ಕೆಲ ಪ್ರದೇಶಗಳನ್ನು, ಚೀನಾದ ಪೂರ್ವ ಭಾಗ, ಸ್ಪೇನಿನ ಪಶ್ಚಿಮ ಭಾಗವನ್ನು ನಿಯಂತ್ರಣಕ್ಕೆ ತೆಗದುಕೊಳ್ಳುವ ಗುರಿ ಇವರಿಗಿದೆ. ಇವರ ಖಲಿಫತ್ ರಾಷ್ಟ್ರ ಶರಿಯಾ ಕಾನೂನಿನಂತೆ ಆಳ್ವಿಕೆಗೊಳಪಡುತ್ತದೆ. ಇವರ ಯೋಜನೆ ಪ್ರಕಾರ 2020ಕ್ಕೆ ಖಲಿಫತ್ ರಾಷ್ಟ್ರದ ಉದಯವಾಗುತ್ತದೆ.
ಈ ಸಂಘಟನೆ ಬಿಡುಗಡೆ ಮಾಡಿರುವ ಪುಸ್ತಕವೊಂದರಲ್ಲಿ ಮ್ಯಾಪ್ ಸೇರಿದಂತೆ ವಿವಿಧ ಮಾಹಿತಿಗಳನ್ನು ನೀಡಲಾಗಿದೆ.
ಇಸಿಸ್ ಒಟ್ಟು 50ಸಾವಿರ ಸದಸ್ಯರನ್ನು ಒಳಗೊಂಡಿದ್ದು, 2 ಬಿಲಿಯನ್ ಪೌಂಡ್ ನಗದು ಮತ್ತು ಆಸ್ತಿಯನ್ನು ಹೊಂದಿದ್ದಾರೆ. ಇರಾಕ್ ಮತ್ತು ಸಿರಿಯಾದ ಬಹುತೇಕ ಕಡೆ ತೈಲ ಮತ್ತು ಅನಿಲದ ಮೇಲೆ ನಿಯಂತ್ರಣ ಸಾಧಿಸಿರುವುದರಿಂದ ಇವರ ಆಸ್ತಿ ಮೌಲ್ಯ ಏರಿಕೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.