ವಾಷಿಂಗ್ಟನ್: ಮುಂದಿನ ವಾರ ನಡೆಯುವ ವಾರ್ಷಿಕ ಅಂತರರಾಷ್ಟ್ರೀಯ ಇಂಧನ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೆರಾವೀಕ್ ಜಾಗತಿಕ ಇಂಧನ ಮತ್ತು ಪರಿಸರ ನಾಯಕತ್ವ (CERAWeek global energy and environment leadership) ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ.
ಮಾರ್ಚ್ 1 ರಿಂದ 5 ರವರೆಗೆ ನಡೆಯಲಿರುವ ಸೆರಾವೀಕ್ ಕಾನ್ಫರೆನ್ಸ್ -2021 ರಲ್ಲಿ ಪ್ರಧಾನಿ ಮೋದಿ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಅದರ ಸಂಘಟಕರಾದ ಐಎಚ್ಎಸ್ ಮಾರ್ಕಿಟ್ ಶುಕ್ರವಾರ ತಿಳಿಸಿದ್ದಾರೆ.
ಸಮ್ಮೇಳನದಲ್ಲಿ ಪ್ರಮುಖ ಭಾಷಣಕಾರರಾಗಿ ಹವಾಮಾನಕ್ಕಾಗಿನ ಯುಎಸ್ ಅಧ್ಯಕ್ಷರ ವಿಶೇಷ ರಾಯಭಾರಿ ಜಾನ್ ಕೆರ್ರಿ, ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ನ ಸಹ-ಅಧ್ಯಕ್ಷರು ಮತ್ತು ಬ್ರೇಕ್ಥ್ರೂ ಎನರ್ಜಿ ಸ್ಥಾಪಕ ಬಿಲ್ ಗೇಟ್ಸ್ ಮತ್ತು ಸೌದಿ ಅರಾಮ್ಕೊ ಅಧ್ಯಕ್ಷ ಮತ್ತು ಸಿಇಒ ಅಮೀನ್ ನಾಸರ್ ಇರಲಿದ್ದಾರೆ.
“ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವದ ಪಾತ್ರದ ಬಗ್ಗೆ ನಾವು ಪ್ರಧಾನಿ ಮೋದಿಯವರ ದೃಷ್ಟಿಕೋನಗಳನ್ನು ಎದುರು ನೋಡುತ್ತಿದ್ದೇವೆ ಮತ್ತು ದೇಶಕ್ಕೆ ಮತ್ತು ವಿಶ್ವದ ರಾಷ್ಟ್ರಗಳಿಗೆ ಭವಿಷ್ಯದ ಇಂಧನ ಅಗತ್ಯಗಳು ಪೂರೈಸಲು ಸುಸ್ಥಿರ ಅಭಿವೃದ್ಧಿಯಲ್ಲಿ ಭಾರತದ ನಾಯಕತ್ವವನ್ನು ವಿಸ್ತರಿಸುವ ಅವರ ಬದ್ಧತೆಗೆ ಸೆರಾ ವೀಕ್ ಜಾಗತಿಕ ಶಕ್ತಿ ಮತ್ತು ಪರಿಸರ ನಾಯಕತ್ವ ಪ್ರಶಸ್ತಿಯನ್ನು ನೀಡಿ ಗೌರವಿಸಲು ನಾವು ಸಂತೋಷಪಡುತ್ತೇವೆ” ಎಂದು ಐಎಚ್ಎಸ್ ಮಾರ್ಕಿಟ್ ಉಪಾಧ್ಯಕ್ಷ ಮತ್ತು ಸಮ್ಮೇಳನದ ಅಧ್ಯಕ್ಷ ಡೇನಿಯಲ್ ಯೆರ್ಗಿನ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.