ಬೆಂಗಳೂರು: ಲ್ಯಾಪ್ಟಾಪ್, ಟ್ಯಾಬ್ ಮತ್ತು ವಿದ್ಯುತ್ ಸರಕುಗಳನ್ನು ಉತ್ಪಾದಿಸುವ ಹೆಸರಾಂತ ಕಂಪನಿ ನೋಯ್ಡಾ ಮೂಲದ ಡಿಕ್ಸನ್ ಟೆಕ್ನಾಲಜೀಸ್ ಇಂಡಿಯಾ ಲಿಮಿಟೆಡ್ ತನ್ನ ಹೊಸ ಉತ್ಪಾದನಾ ಘಟಕವನ್ನು ಕರ್ನಾಟಕದಲ್ಲಿ ಸ್ಥಾಪಿಸಲಿದೆ ಎಂದು ಉಪಮುಖ್ಯಮಂತ್ರಿ ಸಿ ಎನ್ ಅಶ್ವಥ್ ನಾರಾಯಣ ಅವರು ತಿಳಿಸಿದ್ದಾರೆ.
ಡಿಕ್ಸನ್ ಟೆಕ್ನಾಲಜೀಸ್ (ಇಂಡಿಯಾ) ಲಿಮಿಟೆಡ್ ಭಾರತೀಯ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಸೇವೆಗಳ ಕಂಪನಿಯಾಗಿದ್ದು, ಇದು ಹಲವಾರು ಬಹುರಾಷ್ಟ್ರೀಯ ಕಂಪನಿಗಳಿಗೆ ಟೆಲಿವಿಷನ್, ವಾಷಿಂಗ್ ಮೆಷಿನ್, ಸ್ಮಾರ್ಟ್ಫೋನ್, ಎಲ್ಇಡಿ ಬಲ್ಬ್ ಮತ್ತು ಸಿಸಿಟಿವಿ ಭದ್ರತಾ ವ್ಯವಸ್ಥೆಗಳ ಗುತ್ತಿಗೆ ತಯಾರಕವಾಗಿದೆ. ಈ ಕಂಪನಿಯು ನೋಯ್ಡಾ, ಡೆಹ್ರಾಡೂನ್ ಮತ್ತು ತಿರುಪತಿಯಲ್ಲಿ ಉತ್ಪಾದನಾ ಘಟಕಗಳನ್ನು ಹೊಂದಿದ್ದು ಇದು ಭಾರತದಲ್ಲಿ ಅತಿದೊಡ್ಡ ಟೆಲಿವಿಷನ್, ವಾಷಿಂಗ್ ಮೆಷಿನ್ ಮತ್ತು ಬಲ್ಬ್ ಅಸೆಂಬ್ಲಿ ಪ್ಲಾಂಟ್ಗಳನ್ನು ಹೊಂದಿದೆ.
ಘಟಕ ಸ್ಥಾಪನೆಗೆ ಭೂಮಿಯನ್ನು ಈಗಾಗಲೇ ಗುರುತಿಸಲಾಗಿದೆ. ಕೋಲಾರ ಜಿಲ್ಲೆಯಲ್ಲಿ ಅಥವಾ ಬೆಂಗಳೂರು ಗ್ರಾಮೀಣ ಜಿಲ್ಲೆಯ ಹರಲೂರು, ರಾಮನಗರದ ಹರಹೋಲಿ ಸ್ಥಳಗಳಲ್ಲಿ ಯಾವುದಾದರೂ ಒಂದು ಪ್ರದೇಶವನ್ನು ನೀಡಲಾಗುವುದು. ಇಎಸ್ಡಿಎಂ ನೀತಿಯ ಪ್ರಕಾರ, ಕಂಪನಿಯು ಸಬ್ಸಿಡಿ ಮತ್ತು ಇತರ ರಿಯಾಯಿತಿಗಳಿಗೆ ಅರ್ಹವಾಗಿರಲಿದೆ ಎಂದು ಉಪಮುಖ್ಯಮಂತ್ರಿ ವಿವರಿಸಿದರು. ಕಂಪನಿಯ ಕೋರಿಕೆಯನ್ನು ಸುಲಭಗೊಳಿಸಲು ಮತ್ತು ರಾಜ್ಯದಲ್ಲಿ ಹೂಡಿಕೆ ಮತ್ತು ವಸತಿ ಕಲ್ಪಿಸುವ ನಿಟ್ಟಿನಲ್ಲಿ ಸಂಸ್ಥೆಗೆ ಎಲ್ಲಾ ರೀತಿಯ ನೆರವನ್ನು ಒದಗಿಸುವಂತೆ ಉಪ ಆಯುಕ್ತರಿಗೂ ನಿರ್ದೇಶನ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.