ನವದೆಹಲಿ: ನಿಮ್ಮ ರಾಜ್ಯಗಳನ್ನು ಸ್ವತಂತ್ರ ರಾಜ್ಯಗಳು ಎಂದು ಘೋಷಿಸಿ ಎಂದು ‘ಸಿಖ್ಸ್ ಫಾರ್ ಜಸ್ಟೀಸ್’ (ಎಸ್ಎಫ್ಜೆ) ʼ ಸಂಘಟನೆ ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದೆ.
ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಮತ್ತು ಶಿವಸೇನೆಯ ಉದ್ಧವ್ ಠಾಕ್ರೆ ಅವರಿಗೆ ಪತ್ರವನ್ನು ಬರೆಯಲಾಗಿದ್ದು, “ಏಕಪಕ್ಪಷಿಯವಾಗಿ ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರದ ಭೂಪ್ರದೇಶಗಳನ್ನು ಭಾರತದಿಂದ ಸ್ವತಂತ್ರವಾದ ಪ್ರದೇಶಗಳು” ಎಂದು ಘೋಷಿಸುವಂತೆ ಸಲಹೆ ನೀಡಲಾಗಿದೆ.
ಈ ಕ್ರಮವುವೈವಿಧ್ಯತೆಯನ್ನು ನಿರಾಕರಿಸುವ ಮತ್ತು ಇತಿಹಾಸಪೂರ್ವ ಏಕರೂಪತೆಯನ್ನು ಹೇರುವ ಭಾರತೀಯ ಪ್ರಾಬಲ್ಯದಿಂದ ಬಂಗಾಳಿ ಮತ್ತು ಮರಾಠಿ ಜನರ ಸಮೃದ್ಧಿ, ಜನಾಂಗೀಯತೆ, ಗುರುತು, ಭಾಷೆ ಮತ್ತು ಸಂಸ್ಕೃತಿಯನ್ನು ಕಾಪಾಡುತ್ತದೆ ಎಂದು ಅದು ಹೇಳಿದೆ.
ಭಾರತದಿಂದ ನಿಷೇಧಿಸಲ್ಪಟ್ಟ ಈ ಸಂಘಟನೆಯು, ಈ ಹಿಂದೆ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ರೈತರ ಆಂದೋಲನವನ್ನು ತೀವ್ರಗೊಳಿಸಲು ಪ್ರಯತ್ನಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.