ನವದೆಹಲಿ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವ ನಿತಿನ್ ಗಡ್ಕರಿ 18 ರಾಜ್ಯಗಳಲ್ಲಿ ವ್ಯಾಪಿಸಿರುವ 50 ಕುಶಲಕರ್ಮಿ ಆಧಾರಿತ SFURT (Scheme of Fund for Regeneration of Traditional Industries) ಕ್ಲಸ್ಟರ್ಗಳನ್ನು ಉದ್ಘಾಟಿಸಿದ್ದಾರೆ. ಈ ಕ್ಲಸ್ಟರ್ಗಳಲ್ಲಿ, ಮಸ್ಲಿನ್, ಖಾದಿ, ಕಾಯಿರ್, ಕರಕುಶಲ, ಕೈಮಗ್ಗ, ಮರದ ಕರಕುಶಲ, ಚರ್ಮ, ಕುಂಬಾರಿಕೆ, ಕಾರ್ಪೆಟ್ ನೇಯ್ಗೆ, ಬಿದಿರು, ಕೃಷಿ ಸಂಸ್ಕರಣೆ, ಚಹಾಗಳಿಗೆ ಸೇರಿದ 42 ಸಾವಿರಕ್ಕೂ ಹೆಚ್ಚು ಕುಶಲಕರ್ಮಿಗಳನ್ನು ಬೆಂಬಲಿಸಲಾಗುತ್ತಿದೆ.
ಈ ಕ್ಲಸ್ಟರ್ಗಳನ್ನು ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಅಸ್ಸಾಂ, ಛತ್ತೀಸ್ಗಢ, ಗುಜರಾತ್, ಹರಿಯಾಣ, ಜಾರ್ಖಂಡ್, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ನಾಗಾಲ್ಯಾಂಡ್, ಒಡಿಶಾ, ರಾಜಸ್ಥಾನ, ತಮಿಳುನಾಡುಗಳಲ್ಲಿ ಉದ್ಘಾಟಿಸಲಾಗಿದೆ.
ಈ SFURT ಕ್ಲಸ್ಟರ್ಗಳ ಅಭಿವೃದ್ಧಿಗೆ ಎಂಎಸ್ಎಂಇ ಸಚಿವಾಲಯ 85 ಕೋಟಿ ರೂಪಾಯಿ ಹಣವನ್ನು ನೀಡಿದೆ. ಸಾಂಪ್ರದಾಯಿಕ ಕೈಗಾರಿಕೆಗಳು ಮತ್ತು ಕುಶಲಕರ್ಮಿಗಳನ್ನು ಸ್ಪರ್ಧಾತ್ಮಕವಾಗಿಸಲು ಮತ್ತು ಅವರ ಆದಾಯವನ್ನು ಹೆಚ್ಚಿಸಲು ಗುಂಪುಗಳಾಗಿ ಸಂಘಟಿಸಲು ಸಾಂಪ್ರದಾಯಿಕ ಕೈಗಾರಿಕೆಗಳ ಪುನರುಜ್ಜೀವನಕ್ಕಾಗಿಈ ಯೋಜನೆಯನ್ನು ಕೇಂದ್ರವು ಜಾರಿಗೊಳಿಸುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಗಡ್ಕರಿ, “ಗ್ರಾಹಕರಿಗೆ ಯಾವ ರೀತಿಯ ಹಳ್ಳಿ ಉತ್ಪನ್ನಗಳು ಬೇಕಾಗುತ್ತವೆ ಮತ್ತು ಈ ಉತ್ಪನ್ನಗಳನ್ನು ಹೇಗೆ ಆಕರ್ಷಕವಾಗಿ ವಿನ್ಯಾಸಗೊಳಿಸುವುದು ಮತ್ತು ಮಾರಾಟ ಮಾಡುವುದು ಎಂಬುದರ ಕುರಿತು ಹೆಚ್ಚಿನ ಸಂಶೋಧನೆ ಮಾಡಬೇಕಾಗಿದೆ. ಸಾಂಪ್ರದಾಯಿಕ ಉತ್ಪನ್ನಗಳ ವಿನ್ಯಾಸ ಮತ್ತು ಆಕರ್ಷಣೆಯನ್ನು ಸುಧಾರಿಸಲು ಅಹಮದಾಬಾದ್ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಡಿಸೈನ್ ಅನ್ನು ಸಂಪರ್ಕಿಸಬಹುದು” ಎಂದು ಅವರು ಸಲಹೆ ನೀಡಿದರು.
ಈ ಉತ್ಪನ್ನಗಳನ್ನು ಭಾರತ ಮತ್ತು ವಿದೇಶಗಳಲ್ಲಿ ಪರಿಣಾಮಕಾರಿಯಾಗಿ ಮಾರಾಟ ಮಾಡಲು ಅಮೆಜಾನ್ ಅಥವಾ ಅಲಿಬಾಬಾ ಮಾದರಿಯಲ್ಲಿ ವೆಬ್ ಪೋರ್ಟಲ್ ಸಹ ಅಗತ್ಯವಿದೆ ಎಂದು ಗಡ್ಕರಿ ಹೇಳಿದರು. ಇಲ್ಲಿಯವರೆಗೆ ಘೋಷಿಸಲಾದ 371 ರಲ್ಲಿ 82 ಮಾತ್ರ ವರ್ಚುವಲ್ ಆಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಅಂತಹ ಸಮೂಹಗಳ ರಚನೆಯ ವೇಗವನ್ನು ಹೆಚ್ಚಿಸುವ ಅಗತ್ಯವನ್ನು ಸಚಿವರು ಗಮನಸೆಳೆದರು.
ಎಂಎಸ್ಎಂಇ ರಾಜ್ಯ ಸಚಿವ ಪ್ರತಾಪ್ ಚಂದ್ರ ಸರಂಗಿ ಮಾತನಾಡಿ, ಕ್ಲಸ್ಟರ್ಗಳ ರಚನೆಯು ಸಾಂಪ್ರದಾಯಿಕ ಕುಶಲಕರ್ಮಿಗಳ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಗ್ರಾಮಗಳನ್ನು ಆರ್ಥಿಕ ನೀತಿಯ ತಿರುಳಿನಲ್ಲಿ ಇರಿಸುವ ಸರ್ಕಾರದ ಕಾರ್ಯತಂತ್ರದ ಭಾಗವಾಗಿದೆ ಎಂದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.