ಭೋಪಾಲ್: ಹೆಣ್ಣುಮಕ್ಕಳ ಪ್ರಾಮುಖ್ಯತೆಯ ಬಗ್ಗೆ ಜನಜಾಗೃತಿ ಮೂಡಿಸುವ ಪ್ರಯತ್ನವನ್ನು ಮಧ್ಯಪ್ರದೇಶ ಸರ್ಕಾರ ಮಾಡುತ್ತಿದ್ದು, ಅಲ್ಲಿನ ತಿಕಾಮ್ಘರ್ನ ಪಂಚಾಯತ್ವೊಂದು ವಿಭಿನ್ನ ಯೋಜನೆಯನ್ನು ಆರಂಭಿಸಿದೆ.
ಗ್ರಾಮದಲ್ಲಿ ಯಾರದರು ಹೆಣ್ಣು ಮಗುವಿಗೆ ಜನ್ಮ ನೀಡಿದರೆ ಊರಿನವರೆಲ್ಲಾ ಸೇರಿ 5 ಸಾವಿರ ರೂಪಾಯಿಯನ್ನು ಸಂಗ್ರಹಿಸಿ ಆ ಮಗುವಿನ ಹೆಸರಿನಲ್ಲಿ ಫಿಕ್ಸ್ಡ್ ಡೆಪಾಸಿಟ್ ಇಡುತ್ತಾರೆ. ಈ ನಿರ್ಣಯವನ್ನು ಪಂಚಾಯತ್ನ ಆಮ್ ಸಭಾದಲ್ಲಿ ತೆಗೆದುಕೊಳ್ಳಲಾಗಿದೆ.
ಹೆಣ್ಣು ಮಗುವಿನ ಕುಟುಂಬಕ್ಕೆ ಆರ್ಥಿಕ ಬೆಂಬಲ ನೀಡಿ ಈ ಮೂಲಕ ಹೆಣ್ಣು ಮಗುವಿನ ಬಗ್ಗೆ ಕಾಳಜಿ ಮೂಡಿಸುವ ವಿಭಿನ್ನ ಯೋಜನೆ ಇದಾಗಿದೆ. ಆ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿದ್ದರೂ, ಉತ್ತಮವಾಗಿಲ್ಲದೇ ಇದ್ದರೂ 5 ಸಾವಿರ ರೂಪಾಯಿಯನ್ನು ಕೊಡಲಾಗುತ್ತದೆ.
ಆಗಸ್ಟ್ 15ರಿಂದ ಈ ಯೋಜನೆ ಆರಂಭವಾಗಲಿದ್ದು, ಹೆಣ್ಣು ಮಗುವಿನ ಕುಟುಂಬಕ್ಕೆ ಹಣ ಕೊಡುವುದು ಹಳ್ಳಿಗರ ಇಚ್ಛೆಗೆ ಒಳಪಡಿರುತ್ತದೆ, ಇದರಲ್ಲಿ ಕಡ್ಡಾಯವಿಲ್ಲ ಎಂಬುದನ್ನು ಪಂಚಾಯತ್ ಸ್ಪಷ್ಟಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.