ಲಕ್ನೋ: ಹಿಂದೂಗಳ ಪವಿತ್ರ ಪ್ರಾರ್ಥನೆ ಹನುಮಾನ್ ಚಾಲಿಸಾ ಈಗ ಉರ್ದುವಿನಲ್ಲೂ ಲಭ್ಯವಾಗಿದೆ. ಇದಕ್ಕೆ ಕಾರಣೀಕರ್ತನಾಗಿದ್ದು ಜೌನ್ಪುರ ಮುಸ್ಲಿಂ ಯುವಕ ಅಬಿದ್ ಅಲ್ವಿ.
ಹನುಮಾನ್ ಚಾಲಿಸಾವನ್ನು ಈತ ಮುಸದ್ದಾಸ್ ಶೈಲಿಯಲ್ಲಿ ಉರ್ದುವಿಗೆ ಭಾಷಾಂತರಗೊಳಿಸಿದ್ದಾನೆ. ಆರು ಸಾಲುಗಳನ್ನು ಇದು ಒಳಗೊಂಡಿದೆ. ಭಾಷಾಂತರ ಮಾಡಲು ಈತ ಮೂರು ತಿಂಗಳುಗಳನ್ನು ತೆಗೆದುಕೊಂಡಿದ್ದಾನೆ.
ಎರಡು ಧರ್ಮಗಳ ಜನರಿಗೆ ಉಭಯ ಧರ್ಮಗಳ ಸಂಸ್ಕೃತಿ, ಧರ್ಮವನ್ನು ಅರ್ಥಮಾಡಿಕೊಳ್ಳಲು ಇದು ಅನುಕೂಲವಾಗಲಿದೆ ಎಂದಿರುವ ಅಬಿದ್, ಶಿವ ಚಾಲಿಸಾ ಸೇರಿದಂತೆ ಹಲವಾರು ಧಾರ್ಮಿಕ ಬರಹಗಳನ್ನು ಭಾಷಾಂತರಿಸುವ ಗುರಿ ಹೊಂದಿದ್ದಾನೆ.
ಖ್ಯಾತ ಉರ್ದು ಬರಹಗಾರ ಅನ್ವರ ಜಲಲ್ಪುರಿ ಅವರು ಭಗವದ್ಗೀತೆಯನ್ನು ಇತ್ತೀಚಿಗೆ ಉರ್ದುವಿನಲ್ಲಿ ಹೊರತಂದಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.