ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಬಿಕ್ಕಟ್ಟಿನ ಕುರಿತು ಚರ್ಚಿಸಲು ನಡೆಯುತ್ತಿರುವ ಸಾರ್ಕ್ ವರ್ಚುವಲ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಭಾರತ, ಪಾಕಿಸ್ಥಾನಕ್ಕೆ ಆಹ್ವಾನ ನೀಡಿದೆ.
ಕೊರೋನಾ ಸಾಂಕ್ರಾಮಿಕ ಸಂಕಷ್ಟವನ್ನು ಅವಲೋಕಿಸಲು ಭಾರತ ಗುರುವಾರ ದಕ್ಷಿಣ ಏಷ್ಯಾದ ಪ್ರಾದೇಶಿಕ ಸಹಕಾರ ಸಂಘ (ಸಾರ್ಕ್)ದ ದೇಶಗಳೊಡನೆ ಆರೋಗ್ಯ ಕಾರ್ಯದರ್ಶಿಗಳ ಮಟ್ಟದ ಸಭೆ ನಡೆಸಲಿದೆ. ಈ ಕಾರ್ಯಗಾರದಲ್ಲಿ ಭಾಗವಹಿಸಲು ತನ್ನ ವೈರಿ ದೇಶ ಎಂದೇ ಬಿಂಬಿತವಾಗಿರುವ ಪಾಕಿಸ್ಥಾನಕ್ಕೆ ಕೂಡ ಆಹ್ವಾನ ನೀಡಿದೆ. ಈ ಒಟ್ಟು ಕಾರ್ಯಾಗಾರದಲ್ಲಿ ಕೋವಿಡ್-19 ರ ನಿರ್ವಹಣೆ, ಸುಧಾರಿಸಿದ ರೀತಿ ಮತ್ತು ಈ ನಡುವೆ ನಡೆಸಿದ ಆರೋಗ್ಯಕಾರಿ ಉಪಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ.
ಕೊರೋನಾ ಸನ್ನಿವೇಶವನ್ನು ಎದುರಿಸಿದ ಭಾರತದ ಕ್ರಮಗಳು ಈ ವರ್ಚುವಲ್ ಸಭೆಯಲ್ಲಿ ಗಮನ ಸೆಳೆಯಲಿದೆ ಮತ್ತು ಪ್ರಶಂಸೆಗೆ ಪಾತ್ರವಾಗಲಿದೆ. ಕೊರೋನಾವನ್ನು ಅತೀ ವ್ಯವಸ್ಥಿತವಾಗಿ ಎದುರಿಸಿ, ಅದಕ್ಕೆ ಲಸಿಕೆ ಕಂಡು ಹಿಡಿದು ವಿದೇಶಗಳಿಗೆ ಉಡುಗೊರೆಯಾಗಿ ನೀಡುತ್ತಿರುವ ಪ್ರಮುಖ ದೇಶಗಳಲ್ಲಿ ಭಾರತವು ಕೂಡ ಒಂದಾಗಿದೆ.
ಸಾರ್ಕ್ ದೇಶಗಳ ಪಟ್ಟಿಯಲ್ಲಿ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾ ರಾಷ್ಟ್ರಗಳಿದ್ದು, ನವೆಂಬರ್ 2014, ನೇಪಾಳ ಸಾರ್ಕ್ ನಾಯಕರ ಶೃಂಗಸಭೆಯನ್ನು ಆಯೋಜಿಸಿದ್ದಾಗ, ಈ ರಾಷ್ಟ್ರಗಳ ನಾಯಕರು ಕೊನೆಯ ಬಾರಿಗೆ ವೇದಿಕೆಯನ್ನು ಹಂಚಿಕೊಂಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.