ನವದೆಹಲಿ: ಮಳೆ, ಬಿಸಿಲು, ಫಲವತ್ತಾದ ಮಣ್ಣು ಇವುಗಳ ಜೊತೆಯಲ್ಲಿ ಇದೀಗ ರೈತರಿಗೆ ಇಂಟರ್ನೆಟ್ ಕನೆಕ್ಷನ್ ಕೂಡ ಅತಿ ಅವಶ್ಯಕವಾಗಲಿದೆ, ಇಂಡಿಯಾ ಪೋಸ್ಟ್ ರೈತರಿಗಾಗಿ ಅವರ ಉತ್ಪನ್ನಗಳನ್ನು ಆನ್ಲೈನ್ ಮೂಲಕ ಮಾರಾಟ ಮಾಡುವ ಹೊಸ ಪ್ರಾಯೋಗಿಕ ಯೋಜನೆಯನ್ನು ಜಾರಿಗೊಳಿಸುವ ಉದ್ದೇಶ ಹೊಂದಿದೆ. ಇದರಿಂದ ರೈತರು ತಮ್ಮ ಬೆಳೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಅದನ್ನು ಪೋಸ್ಟ್ ಮಾಡಬಹುದು. ಇದನ್ನು ನೋಡಿ ಮೋಸ್ಟ್ ಮಾಸ್ಟರ್ಗಳು ಉತ್ಪನ್ನಗಳನ್ನು ಪಡೆಯುತ್ತಾರೆ. ಬಳಿಕ ಅದನ್ನು ವ್ಯಾಪಾರಸ್ಥರು ಕಲೆಕ್ಟ್ ಮಾಡುತ್ತಾರೆ. ಇದು ರೈತರು ಹಾಗೂ ವ್ಯಾಪಾರಸ್ಥರಿಗೆ ಸಹಕಾರಿಯಾಗಲಿದೆ ಎಂದು ಇಂಡಿಯಾ ಪೋಸ್ಟ್ ತಿಳಿಸಿದೆ.
ಪೋಸ್ಟ್ಮಾಸ್ಟರ್ಗಳಿಗೆ ಸ್ಮಾರ್ಟ್ಫೋನ್ಗಳನ್ನು ಒದಗಿಸಿ ಅವುಗಳ ಸಹಾಯದಿಂದ ಕೃಷಿ ಉತ್ಪನ್ನಗಳ ಚಿತ್ರಗಳನ್ನು ಸೆರೆ ಹಿಡಿದು ಅವುಗಳನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ರೈತರು ಈ ಸೌಲಭ್ಯಕ್ಕೆ ಹೆಚ್ಚುವರಿ ಹಣ ನೀಡಬೇಕಾಗಿಲ್ಲ. ಬದಲಾಗಿ ಈ ಸರಕುಗಳ ಸಾಗಾಟ ಮತ್ತು ಇಂಡಿಯಾ ಪೋಸ್ಟ್ನ ಸೇವೆಗಳನ್ನು ಪಡೆಯಲಿರುವ ಖರೀದಿದಾರರಿಂದ ಇದರ ಕನಿಷ್ಟ ಶುಲ್ಕವನ್ನು ಇಂಡಿಯಾ ಪೋಸ್ಟ್ ಸಂಗ್ರಹಿಸಲಿದೆ. ಈ ಸೇವೆಗಳೊಂದಿಗೆ ಆಂಧ್ರ, ತೆಲಂಗಾಣ, ಹೈದರಾಬಾದ್, ಬೆಂಗಳೂರುಗಳಂತಹ ವಿವಿಧ ಸರಕು ಮಾರುಕಟ್ಟೆಗಳಲ್ಲಿ ಮೂಲಸೌಕರ್ಯ ಬಲಪಡಿಸುವ ಗುರಿ ಹೊಂದಿದೆ.
ಸುಮಾರು 10 ಕೋಟಿ ರೂ.ಗಳ ಕನಿಷ್ಟ ಗುರಿಯೊಂದಿಗೆ ಈ ಕೃಷಿ ಸರಕುಗಳ ವ್ಯವಹಾರ ಅಭಿವೃದ್ಧಿಸುವ ಸಾಧ್ಯತೆ ಇದೆ. ಆಂಧ್ರ ಮತ್ತು ತೆಲಂಗಾಣ ರಾಜ್ಯದ ಎರಡು ಪಟ್ಟಣಗಳಲ್ಲಿ ಇದನ್ನು ಮುಂದಿನ ತಿಂಗಳುಗಳಲ್ಲಿ ಆರಂಭಿಸುವ ಸಾಧ್ಯತೆ ಇದ್ದು, ಪೋಸ್ಟಲ್ ಸೇವೆಗಳು ಕಾರ್ಯನಿರತವಾಗಿ ಉಳಿಯಲು ಶ್ರಮಿಸುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.