ಜಮ್ಮು: ಈಗಾಗಲೇ ಪಂಜಾಬ್ ಮತ್ತು ಉಧಮ್ಪುರಗಳ ಮೇಲೆ ದಾಳಿ ನಡೆಸಿ ಪೈಶಾಚಿಕತೆ ಮೆರೆದಿರುವ ಪಾಕಿಸ್ಥಾನದ ಮೂಲದ ಉಗ್ರ ಸಂಘಟನೆ ಲಷ್ಕರ್-ಇ-ತೋಯ್ಬಾ ಇದೀಗ ಜಮ್ಮು ಕಾಶ್ಮೀರದಲ್ಲಿ ವಿಮಾನವೊಂದನ್ನು ಹೈಜಾಕ್ ಮಾಡಲು ಯೋಜನೆ ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಭಾರತದ ವಶದಲ್ಲಿರುವ 20 ಉಗ್ರರನ್ನು ರಿಲೀಸ್ ಮಾಡುವುದಕ್ಕಾಗಿ ಜಮ್ಮು ಕಾಶ್ಮೀರದಲ್ಲಿ ವಿಮಾನ ಹೈಜಾಕ್ ಮಾಡುವ ಸಂಚು ರೂಪಿಸಲಾಗುತ್ತಿದೆ ಎಂದು ಗುಪ್ತಚರ ವರದಿಗಳು ತಿಳಿಸಿವೆ.
ಇದರಿಂದ ಎಚ್ಚೆತ್ತುಕೊಂಡಿರುವ ಅಲ್ಲಿನ ಸರ್ಕಾರ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಗಡಿಯಾದ್ಯಂತ ಕಣ್ಗಾವಲು ಇರಿಸಿದೆ. ಕೇಂದ್ರ ಗೃಹಸಚಿವಾಲಯ ಕೂಡ ಭದ್ರತೆಯನ್ನು ಬಿಗಿಗೊಳಿಸಿದೆ.
ಇತ್ತೀಚಿಗಷ್ಟೇ ಕಾಶ್ಮೀರದಲ್ಲಿ ಒಟ್ಟು 20 ಉಗ್ರರನ್ನು ಬಂಧಿಸಲಾಗಿದೆ, ಇನ್ನೂ ಹಲವಾರು ಮಂದಿ ಇಲ್ಲಿ ಅಡ್ಡಾಡುತ್ತಿದ್ದಾರೆ ಎನ್ನಲಾಗಿದೆ. ದೇಶದ ವಿವಿಧ ಜೈಲಿನಲ್ಲಿರುವ ತನ್ನ ವ್ಯಕ್ತಿಗಳನ್ನು ಹೊರತರಲು ಲಷ್ಕರ್ ಶತಾಯ ಗತಾಯ ಪ್ರಯತ್ನ ನಡೆಸುತ್ತಿದ್ದು, ಅದಕ್ಕಾಗಿ ತನ್ನ ಸುಸೈಡ್ ಬಾಂಬರ್ಗಳಿಗೆ ಅದು ವಿಮಾನ ಹೈಜಾಕ್ ಮಾಡುವಂತೆ ಅಥವಾ ದಾಳಿಗಳನ್ನು ನಡೆಸುವಂತೆ ಸೂಚನೆ ನೀಡಿದೆ ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.