ನವದೆಹಲಿ: ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಾನಿಕ್ ಡಿವೈಸ್ ಉತ್ಪಾದನಾ ಲೈನ್ ಅನ್ನು ಸ್ಥಾಪನೆ ಮಾಡುವುದಾಗಿ ಅಮೆಜಾನ್ ಘೋಷಣೆ ಮಾಡಿದೆ.
ಫಾಕ್ಸ್ಕಾನ್ನ ಅಂಗಸಂಸ್ಥೆಯಾದ ಕ್ಲೌಡ್ ನೆಟ್ವರ್ಕ್ ಟೆಕ್ನಾಲಜಿಯ ಸಹಭಾಗಿತ್ವದಲ್ಲಿ ಈ ವರ್ಷದ ಕೊನೆಯಲ್ಲಿ ಚೆನ್ನೈನಲ್ಲಿ ಫೈರ್ ಟಿವಿ ಸ್ಟಿಕ್ಗಳು ಸೇರಿದಂತೆ ಅಮೆಜಾನ್ ಸಾಧನಗಳ ತಯಾರಿಕೆಯನ್ನು ಪ್ರಾರಂಭಿಸುವುದಾಗಿ ಅಮೆಜಾನ್ ಮಂಗಳವಾರ ಘೋಷಿಸಿದೆ.
“ಇದು ಭಾರತದ ಮೊದಲ ಅಮೆಜಾನ್ ಉತ್ಪಾದನಾ ಲೈನ್ ಆಗಿದ್ದು, ಇದು ಆತ್ಮನಿರ್ಭರ ಭಾರತಕ್ಕಾಗಿ ಭಾರತ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಉಪಕ್ರಮಕ್ಕೆ ನಮ್ಮ ಬದ್ಧತೆಯನ್ನು ಪುನರುಚ್ಚರಿಸುತ್ತದೆ “ಎಂದು ಅಮೆಜಾನ್ ಬ್ಲಾಗ್ ಪೋಸ್ಟ್ನಲ್ಲಿ ತಿಳಿಸಿದೆ.
ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಮಂಗಳವಾರ ಅಮೆಜಾನ್ನ ಜಾಗತಿಕ ಹಿರಿಯ ಉಪಾಧ್ಯಕ್ಷ ಮತ್ತು ಭಾರತದ ರಾಷ್ಟ್ರ ಮುಖ್ಯಸ್ಥ ಅಮಿತ್ ಅಗರ್ವಾಲ್ ಅವರೊಂದಿಗೆ ವರ್ಚುವಲ್ ಸಭೆ ನಡೆಸಿದರು. ಈ ಸಭೆಯಲ್ಲಿ ಡಿಜಿಟಲ್ ವಲಯಕ್ಕೆ ಸಂಬಂಧಿಸಿದ ವಿಷಯಗಳ ವ್ಯಾಪ್ತಿಯನ್ನು ಚರ್ಚಿಸಲಾಯಿತು. ಈ ಸಭೆಯ ನಂತರ, ಅಮೆಜಾನ್ ಇಂಡಿಯಾ ಭಾರತದಿಂದ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳನ್ನು ತಯಾರಿಸಲು ಪ್ರಾರಂಭಿಸಲಾಗುವುದು. ಮೊದಲಿಗೆ, ಅಮೆಜಾನ್ ಇಂಡಿಯಾ ಅಮೆಜಾನ್ ಫೈರ್ ಟಿವಿ ಸ್ಟಿಕ್ ತಯಾರಿಕೆಯನ್ನು ಪ್ರಾರಂಭಿಸಲಿದೆ ಎಂದು ಘೋಷಣೆ ಮಾಡಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.