ನವದೆಹಲಿ: ಪೋರ್ನ್ ವೆಬ್ಸೈಟ್ಗಳನ್ನು ನಿಷೇಧಿಸುವ ಬಗ್ಗೆ ವಿವಾದಗಳು ಎದ್ದಿರುವಂತೆಯೇ ಸುಪ್ರೀಂಕೋರ್ಟ್ಗೆ ಸೋಮವಾರ ಹೇಳಿಕೆ ನೀಡಿರುವ ಸರ್ಕಾರ, ಮಕ್ಕಳ ಪೋರ್ನ್ಗಳನ್ನು ನಿಷೇಧಿಸಲು ಬದ್ಧರಾಗಿದ್ದೇವೆ. ಆದರೆ ಎಲ್ಲಾ ಪೋರ್ನ್ಗಳನ್ನು ನಿಷೇಧಿಸುವುದು ಸಾಧ್ಯವಿಲ್ಲ ಎಂದಿದೆ.
ಜನರು ಖಾಸಗಿಯಾಗಿ ಏನು ನೋಡುತ್ತಾರೆ ಎಂಬುದನ್ನು ಗಮನಿಸುವುದಕ್ಕಾಗಿ ಪ್ರತಿ ಮನೆಯ ಬೆಡ್ರೂಮ್ ಪ್ರವೇಶಿಸಲು ಸಾಧ್ಯವಿಲ್ಲ ಮತ್ತು ಜನರ ಮನೋರಂಜನೆಯಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂದು ಸರ್ಕಾರದ ಅಟಾರ್ನಿ ಜನರಲ್ ಮುಕುಲ್ ರೊಹತ್ಗಿ ಅವರು ಮುಖ್ಯ ನ್ಯಾಯಮೂರ್ತಿ ಎಚ್ಎಲ್ ದತ್ತು ಅವರಿಗೆ ತಿಳಿಸಿದ್ದಾರೆ.
ಎಲ್ಲಾ ಪೋರ್ನೋಗ್ರಫಿಕ್ ವೆಬ್ಸೈಟ್ಗಳನ್ನು ನಿಷೇಧಿಸಲು ತಾಂತ್ರಿಕ ತೊಂದರೆಗಳು ಎದುರಾಗುತ್ತವೆ. ಪೋರ್ನ್ ವೆಬ್ಸೈಟ್ ವಿಷಯದಲ್ಲಿ ಜನರಿಗೆ ಸ್ವಯಂ ನಿಯಂತ್ರಣ ಅಗತ್ಯ ಎಂದಿರುವ ಮುಕುಲ್, ಚೈಲ್ಡ್ ಲಾಕ್ನಂತಹ ಟೂಲ್ಗಳನ್ನು ಉಪಯೋಗಿಸುವುದು ಅತ್ಯಗತ್ಯ ಎಂದಿದ್ದಾರೆ.
ಅಲ್ಲದೇ ಮಕ್ಕಳ ಪೋರ್ನ್ ವೆಬ್ಸೈಟ್ಗಳನ್ನು ಬ್ಲಾಕ್ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ. ಪೋರ್ನ್ ಬ್ಯಾನ್ಗೆ ಸಂಬಂಧಿಸಿದಂತೆ ಸರ್ಕಾರಿ ವೆಬ್ಸೈಟ್ಗಳಲ್ಲಿ ಜನರು ಸಲಹೆಗಳನ್ನು ನೀಡಬಹುದು ಎಂದಿದೆ.
ಇತ್ತೀಚಿಗಷ್ಟೇ ಸರ್ಕಾರ 857 ಪೋರ್ನ್ ವೆಬ್ಸೈಟ್ಗಳನ್ನು ನಿಷೇಧಿಸಲು ಸೂಚನೆ ನೀಡಿತ್ತು, ಇದಕ್ಕೆ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದವು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.