ಬೆಂಗಳೂರು: ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆ ಕಿಸಾನ್ ಸಮ್ಮಾನ್ ಅನ್ನು ದುರುಪಯೋಗ ಮಾಡಿಕೊಳ್ಳಲು ಹೊಂಚು ಹಾಕುತ್ತಿದ್ದ ಹೊರ ರಾಜ್ಯದವರನ್ನು ಕೃಷಿ ಇಲಾಖೆ ಪತ್ತೆ ಹಚ್ಚಿದೆ.
ಕೃಷಿಕರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಆ ಮೂಲಕ ವಂಚಿಸಿರುವುದನ್ನು ಕೃಷಿ ಇಲಾಖೆ ಪತ್ತೆ ಮಾಡಿದೆ. ಕೃಷಿ ಸಮ್ಮಾನ್ನಲ್ಲಿ ರೈತರಿಗೆ ಸಲ್ಲಬೇಕಾದ ಹಣವನ್ನು ನಕಲಿ ಖಾತೆಗಳ ಮೂಲಕ ಲೂಟಿ ಮಾಡುತ್ತಿದ್ದ ವಂಚರಕ ಜಾಲ ಇದೀಗ ಕೃಷಿ ಇಲಾಖೆಯ ಗಮನಕ್ಕೆ ಬಂದಿದೆ. ಚಿತ್ರದುರ್ಗ, ಬೀದರ್ ಜಿಲ್ಲಾ ವ್ಯಾಪ್ತಿಯಲ್ಲಿ ಇಂತಹ ಘಟನೆ ಬೆಳಕಿಗೆ ಬಂದಿದೆ. ಖಾತೆಗಳ ಅಸಹಜ ವರ್ತನೆಯಿಂದಾಗಿ ಸಂದೇಹಗೊಂಡ ಅಧಿಕಾರಿಗಳು ಈ ಖಾತೆಗಳ ಅಸಲಿಯತ್ತು ಪತ್ತೆಗೆ ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಇದು ಹೊರ ರಾಜ್ಯಕ್ಕೆ ಸಂಬಂಧಿಸಿದ ಖಾತೆಗಳು ಎಂಬುದು ಆ ಖಾತೆಗಳ ಐಎಫ್ಎಸ್ಸಿ ಸಂಖ್ಯೆಗಳಿಂದ ತಿಳಿದು ಬಂದಿದೆ.
ಕೃಷಿ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಮತ್ತಷ್ಟು ಆಳವಾಗಿ ಪರಿಶೀಲನೆ ನಡೆಸಿದ್ದು, ಈ ಸಂದರ್ಭದಲ್ಲಿ ಇಂತಹ ಹಲವು ಖಾತೆಗಳು ಕಾರ್ಯ ನಿರ್ವಹಿಸುತ್ತಿರುವುದು ಮತ್ತು ಅವುಗಳಿಂದ ಈಗಾಗಲೇ ವಂಚನೆ ನಡೆದಿರಬಹುದಾದ ಸಾಧ್ಯತೆಗಳ ಬಗೆಗೂ ಅನುಮಾನಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಸೈಬರ್ ಠಾಣೆಗೂ ಅಧಿಕಾರಿಗಳು ದೂರು ನೀಡಿದ್ದಾರೆ. ಸುಮಾರು 85 ಸಾವಿರ ಅನುಮಾನಾಸ್ಪದ ಖಾತೆಗಳನ್ನು ಸಹ ಈಗಾಗಲೇ ಅಮಾನತು ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.