ನವದೆಹಲಿ: ಗಣರಾಜ್ಯೋತ್ಸವ ದಿನದಂದು ನಡೆಸಲಾದ ರೈತರ ಟ್ರ್ಯಾಕ್ಟರ್ ಪೆರೇಡ್ ಸಂದರ್ಭದಲ್ಲಿ ದೊಡ್ಡ ಮಟ್ಟದಲ್ಲಿ ದಾಂಧಲೆಯೆಬ್ಬಿಸಿ ಐತಿಹಾಸಿಕ ಕೆಂಪು ಕೋಟೆಯಲ್ಲಿ ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿದ ಪ್ರಕರಣದ ಪ್ರಮುಖ ಆರೋಪಿಗಳಾದ ದೀಪ್ ಸಿಧು ಮತ್ತು ಇಕ್ಬಾಲ್ ಸಿಂಗ್ ಅನ್ನು ಇಂದು ಪೊಲೀಸರು ಕೆಂಪುಕೋಟೆಗೆ ಕರೆದೊಯ್ದಿದ್ದಾರೆ.
ಗಣರಾಜ್ಯೋತ್ಸವದಂದು ನಡೆದ ಘಟನೆಗಳ ದೃಶ್ಯವನ್ನು ಮರುಸೃಷ್ಟಿಸಲು ದೆಹಲಿ ಪೊಲೀಸರ ಅಪರಾಧ ಶಾಖೆ ಶನಿವಾರ ದೀಪ್ ಸಿಧು ಮತ್ತು ಇನ್ನೊಬ್ಬ ಆರೋಪಿ ಇಕ್ಬಾಲ್ ಸಿಂಗ್ ಅವರನ್ನು ಕೆಂಪು ಕೋಟೆಗೆ ಕರೆದೊಯ್ದಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಿಧು, ಜನವರಿ 26 ರಂದು ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳ ಹಿಂದಿನ ಪ್ರಮುಖ ಸೂತ್ರಧಾರಿ ಎಂದು ಪೊಲೀಸರು ತಿಳಿಸಿದ್ದಾರೆ.
ದೆಹಲಿ ಪೊಲೀಸರ ವಿಶೇಷ ತಂಡವು ಫೆಬ್ರವರಿ 8ರ ರಾತ್ರಿ ಹರಿಯಾಣದ ಕರ್ನಾಲ್ ಬೈಪಾಸ್ನಿಂದ ಈತನನ್ನು ಬಂಧಿಸಿತ್ತು ಮತ್ತು ಮರುದಿನ ನಗರ ನ್ಯಾಯಾಲಯವು ಈತನನ್ನು ಏಳು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿತು.
ಈ ಪ್ರಕರಣದ ತನಿಖೆ ನಡೆಸುತ್ತಿರುವ ತಂಡವು ಐತಿಹಾಸಿಕ ಸ್ಮಾರಕ ಕೆಂಪು ಕೋಟೆಯಲ್ಲಿ ಪರಿಶೀಲನೆ ನಡೆಸಲಿದೆ ಮತ್ತು ಆರೋಪಿಗಳು ಇಲ್ಲಿಗೆ ಆಗಮಿಸಲು ತೆಗೆದುಕೊಂಡ ಮಾರ್ಗ, ಸ್ಥಳದಲ್ಲಿ ಅವರು ನಡೆಸಿದ ಚಟುವಟಿಕೆಗಳು ಮತ್ತು ಹಿಂಸಾಚಾರ ಭುಗಿಲೆದ್ದಾಗ ಏನೆಲ್ಲಾ ಆಯಿತು ಎಂಬುದನ್ನು ಪರಿಶೀಲಿಸುತ್ತದೆ ಎಂದು ಅಧಿಕಾರಿ ಹೇಳಿದ್ದಾರೆ.
ಇಕ್ಬಾಲ್ ಸಿಂಗ್ ಅನ್ನು ಮಂಗಳವಾರ ರಾತ್ರಿ ಪಂಜಾಬ್ನ ಹೋಶಿಯಾರ್ಪುರದಿಂದ ದೆಹಲಿ ಪೊಲೀಸರ ವಿಶೇಷ ಘಟಕದ ಉತ್ತರ ವಿಭಾಗ ಬಂಧನಕ್ಕೊಳಪಡಿಸಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.