ನವದೆಹಲಿ: ಆಗಸ್ಟ್ 4ರಂದು ನಾಪತ್ತೆಯಾಗಿದ್ದ ಪವನ್ ಹನ್ಸ್ ಹೆಲಿಕಾಫ್ಟರ್ನ ಅವಶೇಷಗಳು ಅರುಣಾಚಲ ಪ್ರದೇಶದ ತಿರಪ್ ಜಿಲ್ಲೆಯಲ್ಲಿ ಪತ್ತೆಯಾಗಿವೆ.
ತಿರಪ್ನ ಖೋನ್ಸ್ದ ದಕ್ಷಿಣ ಧಿಕ್ಕಿನಿಂದ 12 ಕಿ.ಮೀ ದೂರದಲ್ಲಿ ಈ ಹೆಲಿಕಾಫ್ಟರ್ ಅವಶೇಷಗಳು ಪತ್ತೆಯಾಗಿವೆ ಎಂದು ಗೃಹಸಚಿವಾಲಯದ ರಾಜ್ಯ ಖಾತೆ ಸಚಿವ ಕಿರಣ್ ರಿಜ್ಜು ಸ್ಪಷ್ಟಪಡಿಸಿದ್ದಾರೆ.
ಏರ್ಪೋರ್ಸ್ ವಿಮಾನಗಳು ಗಸ್ತು ತಿರುಗುತ್ತಿದ್ದ ವೇಳೆ ಈ ಅವಶೇಷಗಳು ಪತ್ತೆಯಾಗಿವೆ, ಇದೀಗ ಆ ಅವಶೇಷ ಪವನ್ ಹನ್ಸ್ನದ್ದೇ ಎಂದು ಸ್ಪಷ್ಟವಾಗಿದೆ. ಆದರೆ ಅದರೊಳಗಿದ್ದ 3 ಮಂದಿಯ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.
ಖೊನ್ಸಾದಿಂದ ಟೇಕ್ ಆಫ್ ಆಗಿದ್ದ ವಿಮಾನ ಬಳಿಕ ನಾಪತ್ತೆಯಾಗಿತ್ತು, ಅದರೊಳಗೆ ಯುವ ಐಎಎಸ್ ಅಧಿಕಾರಿ ಕಮಲೇಶ್ ಜೋಶಿ ಸೇರಿದಂತೆ ಒಟ್ಟು 3 ಮಂದಿ ಪ್ರಯಾಣಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.