ನವದೆಹಲಿ: ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಇಂದು ಸಂಸತ್ತಿನಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ. ಭಾರತದ ಸಂವಿಧಾನ ಮತ್ತು ಭಾರತೀಯ ಕಾನೂನಿನ ಪ್ರಕಾರ, ಪರಿಶಿಷ್ಟ ಜಾತಿ/ಪಂಗಡಗಳಿಗೆ ಸೇರಿದವರು ಇಸ್ಲಾಂ ಅಥವಾ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾದರೆ ಪರಿಶಿಷ್ಟ ಜಾತಿ/ಪಂಗಡದ ಮೀಸಲಾತಿ ಸೌಲಭ್ಯಗಳನ್ನು ಪಡೆಯಲು ಅರ್ಹರಾಗಿರುವುದಿಲ್ಲ ಎಂದಿದ್ದಾರೆ.
ಮೀಸಲಾತಿ ಇರುವ ಕ್ಷೇತ್ರಗಳಿಂದ ಸ್ಪರ್ಧಿಸಲು ಅರ್ಹತೆಯ ಕುರಿತು ಮಾತನಾಡಿದ ಸಚಿವರು, “ಸಂವಿಧಾನದ ಪರಿಶಿಷ್ಟ 3 (ಪರಿಶಿಷ್ಟ ಜಾತಿ) ಆದೇಶದ ಪ್ರಕಾರ ಹಿಂದೂ, ಸಿಖ್ ಅಥವಾ ಬೌದ್ಧ ಧರ್ಮಕ್ಕಿಂತ ಭಿನ್ನವಾದ ಧರ್ಮವನ್ನು ಪಾಲಿಸುವ ಯಾವುದೇ ವ್ಯಕ್ತಿಯನ್ನು ಪರಿಶಿಷ್ಟ ಜಾತಿಯ ಸದಸ್ಯನೆಂದು ಪರಿಗಣಿಸಲಾಗುವುದಿಲ್ಲ” ಎಂದಿದ್ದಾರೆ.
ಬಿಜೆಪಿ ಸದಸ್ಯ ಜಿ ವಿ ಎಲ್ ನರಸಿಂಹ ರಾವ್ ಅವರ ಪ್ರಶ್ನೆಗೆ ಉತ್ತರವಾಗಿ ಪ್ರಸಾದ್ ಈ ವಿಷಯ ತಿಳಿಸಿದರು.
1950 ರಲ್ಲಿ, ನೆಹರೂ ಸರ್ಕಾರವು “ಪರಿಶಿಷ್ಟ ಜಾತಿ” ಯ ವ್ಯಾಖ್ಯಾನವನ್ನು ಹಿಂದೂ ಧರ್ಮದ ಸದಸ್ಯರಿಗೆ ಮಾತ್ರ ಸೀಮಿತಗೊಳಿಸುವ ಆದೇಶವನ್ನು ಜಾರಿಗೊಳಿಸಿತು, ನಂತರ ಇದನ್ನು 1956 ರಲ್ಲಿ ಸಿಖ್ಖರಿಗೆ ಮತ್ತು 1990 ರಲ್ಲಿ ಬೌದ್ಧರಿಗೆ ವಿಸ್ತರಿಸಲಾಯಿತು.
ಈ ಹಿಂದೆ, ಜಾತಿ ಪ್ರಯೋಜನಗಳು ಕೇವಲ ಭಾರತೀಯ ಸಮುದಾಯಗಳಿಗೆ ಮಾತ್ರ ಎಂಬುದನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ.
“ಯಾವುದೆ ವ್ಯಕ್ತಿಯು ಹಿಂದೂ ಧರ್ಮವನ್ನು ಬಿಟ್ಟು ಕ್ರಿಶ್ಚಿಯನ್ ಆದ ನಂತರ, ಹಿಂದೂ ಧರ್ಮದ ಕಾರಣದಿಂದಾಗಿ ಆತನ ಮೇಲೆ ನಡೆಯುತ್ತಿದ್ದ ಸಾಮಾಜಿಕ ಮತ್ತು ಆರ್ಥಿಕ ತೊಂದರೆಗಳು ನಿಲ್ಲುತ್ತದೆ. ಹೀಗಾಗಿ ಅವನಿಗೆ ರಕ್ಷಣೆ ನೀಡುವುದು ಮುಂದೆ ಅಗತ್ಯವಾಗುವುದಿಲ್ಲ ಮತ್ತು ಈ ಕಾರಣಕ್ಕಾಗಿ ಅವನು ನಿಗದಿತ ಜಾತಿಯ ವ್ಯಕ್ತಿಯಲ್ಲ ಎಂದು ಪರಿಗಣಿಸಲಾಗುತ್ತದೆ ”ಎಂದು ನ್ಯಾಯಾಲಯವು 2015 ರ ತೀರ್ಪಿನಲ್ಲಿ ಹೇಳಿದೆ.
ಕ್ರಿಶ್ಚಿಯನ್ ಧರ್ಮ ಅಥವಾ ಇಸ್ಲಾಂ ಧರ್ಮದಿಂದ ಭಾರತೀಯ ಧರ್ಮಗಳಿಗೆ ಹಿಂದಿರುಗಿದ ಮತ್ತು ಅವರ ಪೂರ್ವಜರು ಪರಿಶಿಷ್ಟ ಜಾತಿ ಎಂದು ವರ್ಗೀಕರಿಸಲ್ಪಟ್ಟ ಜಾತಿಗೆ ಸೇರಿದವರಾಗಿದ್ದರೆ ವ್ಯಕ್ತಿಗೆ ಮೀಸಲಾತಿ ಸೌಲಭ್ಯ ಪಡೆಯಲು ಅರ್ಹತೆ ಇದೆ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.