ನವದೆಹಲಿ: ಕ್ವಿಟ್ ಇಂಡಿಯಾ ಚಳುವಳಿಯ 73ನೇ ವರ್ಷಾಚರಣೆಯ ಅಂಗವಾಗಿ ಭಾನುವಾರ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಿಗೆ ರಾಷ್ಟ್ರಪತಿ ಭವನದಲ್ಲಿ ಸನ್ಮಾನ ಮಾಡಿದರು.
ದೇಶದಾದ್ಯಂತ ಇರುವ ಸ್ವಾತಂತ್ರ್ಯ ಹೋರಾಟಗಾರರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು. ಉಪರಾಷ್ಟ್ರಪತಿ ಹಮೀದ್ ಅನ್ಸಾರಿ, ಸಚಿವರಾದ ರಾಜನಾಥ್ ಸಿಂಗ್, ಕಿರಣ್ ರಿಜ್ಜು ಅವರುಗಳೂ ಪಾಲ್ಗೊಂಡಿದ್ದರು.
ಸಮಾರಂಭದ ಬಳಿಕ ಟ್ವಿಟ್ ಮಾಡಿದ ಮೋದಿ, ‘ರಾಷ್ಟ್ರಪತಿ ಭವನದಲ್ಲಿ ಸ್ವತಂತ್ರ್ಯ ಹೋರಾಟಗಾರರೊಂದಿಗೆ ಅದ್ಭುತ ಸಮಾಲೋಚನೆ ನಡೆಸಿದೆ. ನಿಜಕ್ಕೂ ಅವರ ತ್ಯಾಗ ಶ್ಲಾಘನೀಯ’ ಎಂದಿದ್ದಾರೆ.
ವಿಶೇಷವೆಂದರೆ ಸನ್ಮಾನಿತರಾದ ಸ್ವಾತಂತ್ರ್ಯ ಹೋರಾಟಗಾರ ವಸಂತ ಜೆಬಿ ಬೋಂದ್ರೆ ಅವರು ನಿನ್ನೆ 100ನೇ ಹುಟ್ಟು ಹಬ್ಬವನ್ನು ಆಚರಿಕೊಂಡರು. ಅವರಿಗೆ ರಾಷ್ಟ್ರಪತಿ ವಿಶೇಷ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುತ್ತಿರುವ ಪೆನ್ಯನನ್ನು ಶೇ.218ರಷ್ಟು ಏರಿಕೆ ಮಾಡುವುದಾಗಿಯೂ ಸರ್ಕಾರ ಘೋಷಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.