ಮುಂಬಯಿ: ವಿಶ್ವಸಂಸ್ಥೆಯ ಹೆಣ್ಣು ಮಕ್ಕಳ ರಾಯಭಾರಿಯಾಗಿರುವ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್, ಮಗಳಂದಿರ ಸಪ್ತಾಹಕ್ಕೆ ಶುಭಕೋರಿದ್ದಾರೆ. ಅಲ್ಲದೇ ಒಬ್ಬ ಪುತ್ರಿ 10 ಪುತ್ರರಿಗೆ ಸಮಾನಳು ಎಂಬ ಸ್ಫೂರ್ತಿದಾಯಕ ಮಾತನ್ನಾಡಿದ್ದಾರೆ.
ಟ್ವಿಟರ್ನಲ್ಲಿ ಭಾವನಾತ್ಮಕವಾಗಿ ಹೆಣ್ಣುಮಕ್ಕಳ ಬಗ್ಗೆ ಅಭಿಮಾನ ವ್ಯಕ್ತಪಡಿಸಿರುವ ಬಿಗ್ ಬೀ, ‘ಮಗಳನ್ನು ನೀವು ಮಗ ಎಂದು ಕರೆಯಬಹುದು ಆದರೆ ಮಗನನ್ನು ಯಾವತ್ತೂ ಮಗಳು ಎಂದು ಕರೆಯಲು ಸಾಧ್ಯವಿಲ್ಲ, ಅದಕ್ಕಾಗಿಯೇ ಮಗಳಂದಿರು ಯಾವತ್ತೂ ಸ್ಪೆಶಲ್. ಹ್ಯಾಪಿ ಡಾಟರ್ಸ್ ವೀಕ್… ಮಗಳೆಂದರೆ ಟೆನ್ಯನ್ ಅಲ್ಲ, ಈಗಿನ ಕಾಲದಲ್ಲಿ ಮಗಳು ಹತ್ತು ಪುತ್ರರಿಗೆ ಸಮನಾದವಳು’ ಎಂದಿದ್ದಾರೆ.
‘ಮಗಳು ತುಂಬಾನೇ ಸ್ಪೆಶಲ್.. ನಿಮ್ಮ ಪುಟ್ಟ ಮಗಳು ನಿಮ್ಮ ಕೈಯನ್ನು ಕೆಲವೇ ಸಮಯದವರೆಗೆ ಹಿಡಿಯಬಹುದು ಆದರೆ ನಿಮ್ಮ ಹೃದಯವನ್ನು ಜೀವನಪರ್ಯಂತ ಹಿಡಿದಿರುತ್ತಾಳೆ’ ಎಂದಿದ್ದಾರೆ.
‘ಇದು ಡಾಟರ್ಸ್ ವೀಕ್, ನೀವು ಮಗಳಾಗಿದ್ದರೆ ಅಥವಾ ಮಗಳನ್ನು ಹೊಂದಿದ್ದರೆ, ನಿಮ್ಮ ಉಸಿರಿನಷ್ಟೇ ಅವಳನ್ನು ಪ್ರೀತಿಸುತ್ತಿದ್ದರೆ, ಅವಳ ಬಗ್ಗೆ ಹೆಮ್ಮೆ ಹೊಂದಿದ್ದರೆ, ಈ ಸಂದೇಶವನ್ನು ಎಲ್ಲರಿಗೂ ತಲುಪಿಸಿ..ನಾನು ಅದನ್ನು ಮಾಡುತ್ತಿದ್ದೇನೆ…ಮಗಳು ಯಾವತ್ತೂ ದೇವತೆ’ ಎಂದು ಅವರು ಕರೆ ನೀಡಿದ್ದಾರೆ.
ಅಮಿತಾಭ್ ಅವರಿಗೆ ಶ್ವೇತ ನಂದ ಎಂಬ ಮಗಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.