ನವದೆಹಲಿ: ಭಾರತದ ಪುರಾತನ ವಿದ್ಯೆ ಯೋಗದ ವಿವಿಧ ಭಂಗಿಗಳಿಗೆ ಪೇಟೆಂಟ್ , ಟ್ರೇಡ್ಮಾರ್ಕ್ ಪಡೆಯಲು ಹಲವು ವಿದೇಶಿ ಸಂಸ್ಥೆಗಳು ಪ್ರಯತ್ನಿಸುತ್ತಿವೆ. ಇವುಗಳ ಪ್ರಯತ್ನಕ್ಕೆ ತಡೆಯೊಡ್ಡಲು ಭಾರತ ಸರ್ಕಾರ ಮುಂದಾಗಿದೆ.
ಸುಮಾರು 1500 ಯೋಗಾಸನಗಳ ಪಟ್ಟಿ ಮಾಡಲಾಗಿದ್ದು, ಅವುಗಳಲ್ಲಿ 250 ಆಸನಗಳ ವೀಡಿಯೋಗ್ರಫಿ ಮಾಡಿ ಅವುಗಳನ್ನು ಭಾರತದ ‘ಸಾಂಪ್ರದಾಯಿಕ ಜ್ಞಾನ’ ಎಂದು ಈಗಾಗಲೇ ವರ್ಗೀಕರಿಸಿದೆ. ಸರ್ಕಾರ ಆರಂಭಿಸಿರುವ’ಟ್ರೆಡಿಷನಲ್ ನಾಲೆಡ್ಜ್ ಡಿಜಿಟಲ್ ಲೈಬ್ರರಿ’ಯ ಅಂಗವಾಗಿ ಈ ಕಾರ್ಯವನ್ನು ಆರಂಭಿಸಲಾಗಿದೆ.
ಪುರಾತನ ಗ್ರಂಥಗಳಲ್ಲಿರುವ 1500 ಯೋಗ ಟೆಕ್ನಿಕ್ಗಳನ್ನು ತಜ್ಞರು ಗುರುತಿಸಿದ್ದಾರೆ, ಈಗಾಗಲೇ 250 ಆಸನಗಳ ವಿಡಿಯೋಗಳನ್ನು ಮಾಡಲಾಗಿದೆ. ಈ ಎಲ್ಲಾ ಪ್ರಕ್ರಿಯೆಗಳು ಮುಗಿಯಲು ಕನಿಷ್ಠ ಆರು ತಿಂಗಳುಗಳು ಬೇಕಾಗಲಿವೆ. ಬಳಿಕ ಇದು ಭಾರತದ ದಾಖಲೆಗಳನ್ನು ಸೇರಲಿದೆ.
ಜಗತ್ತಿನಾದ್ಯಂತ ಇರುವ ಎಂಎನ್ಸಿಗಳು, ವ್ಯಕ್ತಿಗಳು ಭಾರತದ ಪುರಾತನ ಜ್ಞಾನಗಳಿಗೆ ಪೇಟೆಂಟ್ ಪಡೆಯಲು ಮುಂದಾಗುತ್ತಿದ್ದಾರೆ. ಇದಕ್ಕೆ ತಡೆಯೊಡ್ಡುವುದಕ್ಕಾಗಿ ಭಾರತ ಯೋಗ ಟೆಕ್ನಿಕ್ಗಳ ಶಾರ್ಟ್ಲಿಸ್ಟ್ ಮಾಡಿ ಅದನ್ನು ಭಾರತದ ಪಾರಂಪರಿಕ ಕಲೆ ಎಂದು ಸಾರಿ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.