ನವದೆಹಲಿ: ಜನವರಿ 26ರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ರೈತರು ನಡೆಸಿದ ಟ್ರ್ಯಾಕ್ಟರ್ ಪೆರೇಡ್ ವೇಳೆ ಹಿಂಸಾಚಾರ ಭುಗಿಲೇಳಲು ಕಾರಣೀಕರ್ತನಾದ ಮತ್ತು ಕೆಂಪು ಕೋಟೆಯಲ್ಲಿ ಧಾರ್ಮಿಕ ಧ್ವಜ ಹಾರಿಸಿದ ಆರೋಪವನ್ನು ಹೊತ್ತಿರುವ ಪಂಜಾಬ್ ನಟ ದೀಪ್ ಸಿಧುನನ್ನು ಬಂಧಿಸಲಾಗಿದೆ.
ಘಟನೆಯ ಬಳಿಕ ಈತ ತಲೆ ಮರೆಸಿಕೊಂಡಿದ್ದ, ಆದರೆ ಫೇಸ್ಬುಕ್ ಪೋಸ್ಟ್ ಮೂಲಕ ಸಂದೇಶ ಹರಿಬಿಡುತ್ತಿದ್ದ. ಈತನ ಬಗ್ಗೆ ಮಾಹಿತಿ ನೀಡಿದವರಗೆ ಪೊಲೀಸರು ಬಹುಮಾನವನ್ನು ಘೋಷಣೆ ಮಾಡಿದ್ದರು.
ಕೇಂದ್ರದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸಿದ ಟ್ರಾಕ್ಟರ್ ಪೆರೇಡ್ ವೇಳೆ ಪ್ರತಿಭಟನಾಕಾರರು ನಿಗದಿತ ಮಾರ್ಗ ಮತ್ತು ವೇಳಾಪಟ್ಟಿಯನ್ನು ಮುರಿದು, ಕೆಂಪು ಕೋಟೆಯೊಳಗೆ ಬಲವಂತವಾಗಿ ನುಗ್ಗಲು ದಾರಿ ಮಾಡಿಕೊಟ್ಟಿದ್ದು ಈ ಸಿಧು ಎನ್ನಲಾಗಿದೆ. ಸಿಖ್ ಧಾರ್ಮಿಕ ಧ್ವಜವನ್ನು ಹಾಕಿದ್ದ ದೀಪ್ ಸಿಧು ಅವ್ಯವಸ್ಥೆ ಮತ್ತು ಘರ್ಷಣೆಗೆ ಮೂಲ ಕಾರಣವಾಗಿದ್ದ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.