ನವದೆಹಲಿ: ಉತ್ತರಪ್ರದೇಶದ ಗೋರಖ್ಪುರದಲ್ಲಿ ಚೌರಿ ಚೌರಾ ಶತಮಾನೋತ್ಸವವನ್ನು ಇಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, “ಚೌರಿ ಚೌರಾ ಘಟನೆ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿದ ಒಂದೇ ಒಂದು ಘಟನೆಯಲ್ಲ, ಇದು ಬ್ರಿಟಿಷ್ ಆಡಳಿತದ ವಿರುದ್ಧದ ಉದ್ವೇಗದ ಸಾಮೂಹಿಕ ಅಭಿವ್ಯಕ್ತಿಯಾಗಿದೆ” ಎಂದು ಹೇಳಿದ್ದಾರೆ.
“ಚೌರಿ ಚೌರದ ಹುತಾತ್ಮರಿಗೆ ಇತಿಹಾಸದಲ್ಲಿ ಅಪೇಕ್ಷಿತ ಸ್ಥಾನವನ್ನು ನೀಡಿಲ್ಲದಿರಬಹುದು, ಆದರೆ ಅವರ ತ್ಯಾಗವು ಅಮರವಾಗಿದೆ” ಎಂದು ಮೋದಿ ಹೇಳಿದ್ದಾರೆ.
“ನಾವು ನಮ್ಮ ಸ್ವಾತಂತ್ರ್ಯದ 75 ವರ್ಷಗಳನ್ನು ಪ್ರವೇಶಿಸುತ್ತಿದ್ದೇವೆ ಮತ್ತು ಈ ಶತಮಾನೋತ್ಸವವು ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸುವ ಸಂದರ್ಭವಾಗಿದೆ” ಎಂದು ಹೇಳಿದರು.
ಚೌರಿ ಚೌರಾ ಶತಮಾನೋತ್ಸವಕ್ಕೆ ಮೀಸಲಾಗಿರುವ ಅಂಚೆ ಚೀಟಿಯನ್ನು ಪ್ರಧಾನಿ ಬಿಡುಗಡೆ ಮಾಡಿದರು.
ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವ ಪಡೆದುಕೊಂಡಿರುವ ಚೌರ ಚೌರಿ ಘಟನೆಗೆ 100 ವರ್ಷಗಳು ಸಂದ ದಿನ ಇಂದು. ಈ ಐತಿಹಾಸಿಕ ಚೌರಿ ಚೌರಾ ಘಟನೆಯನ್ನು ಗುರುತಿಸಲು ಉತ್ತರಪ್ರದೇಶದಲ್ಲಿ ವರ್ಷಪೂರ್ತಿ ಆಚರಣೆಗಳು ಪ್ರಾರಂಭವಾಗಿವೆ. ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಪ್ರಬಂಧ ಬರವಣಿಗೆ, ಚರ್ಚೆಗಳು ಮತ್ತು ಇತರ ಸ್ಪರ್ಧೆಗಳು ರಾಜ್ಯಾದ್ಯಂತ ನಡೆಯಲಿವೆ. ಎಲ್ಲಾ ಸರ್ಕಾರಿ ಇಲಾಖೆಗಳು ಚೌರಿ ಚೌರಾ ಶತಮಾನೋತ್ಸವದ ಲೋಗೋವನ್ನು ಎಲ್ಲಾ ಪತ್ರವ್ಯವಹಾರಗಳಿಗೆ ಬಳಸಲಿವೆ. ಒಂದು ಹೊಸ ಉಪಕ್ರಮದಲ್ಲಿ, ಗೋರಖ್ಪುರ ವಿಭಾಗದ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳನ್ನು ಚೌರಿ ಚೌರಾ ಹುತಾತ್ಮತೆ ಮತ್ತು ಇತರ ಸ್ಮಾರಕ ತಾಣಗಳ ಪ್ರವಾಸಕ್ಕೆ ಕರೆದೊಯ್ಯಲಾಗುತ್ತಿದೆ.
ನಮ್ಮ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದ ಬಗ್ಗೆ ಯುವ ಪೀಳಿಗೆಗೆ ಸಂವೇದನೆ ಮೂಡಿಸಲು ರಾಜ್ಯ ಸರ್ಕಾರ ಚೌರಿಚೌರಾ 100 ಡಾಟ್ ಕಾಮ್ ಅನ್ನು ಮೀಸಲಿಟ್ಟಿದೆ. ಐತಿಹಾಸಿಕ ಘಟನೆಯನ್ನು ರಾಜ್ಯ ಮಂಡಳಿ ಪಠ್ಯಕ್ರಮದಲ್ಲಿ ಸೇರಿಸಲು ಮುಖ್ಯಮಂತ್ರಿ ಆದೇಶಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.