ಯಾಂಗೊನ್: ಮಯನ್ಮಾರಿನ ನಾಯಕಿ ಆಂಗ್ ಸಾನ್ ಸೂಕಿ ಮತ್ತು ಆಡಳಿತ ಪಕ್ಷದ ಇತರ ಹಿರಿಯ ವ್ಯಕ್ತಿಗಳನ್ನು ಇಂದು ಮುಂಜಾನೆ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಆಡಳಿತ ರಾಷ್ಟ್ರೀಯ ಲೀಗ್ ಫಾರ್ ಡೆಮಾಕ್ರಸಿ (ಎನ್ಎಲ್ಡಿ) ವಕ್ತಾರರು ಸೋಮವಾರ ತಿಳಿಸಿದ್ದಾರೆ.
ಅಲ್ಲಿನ ನಾಗರಿಕ ಸರ್ಕಾರ ಮತ್ತು ಪ್ರಬಲ ಮಿಲಿಟರಿಯ ನಡುವೆ ಕಳೆದ ಕೆಲವು ದಿನಗಳಿಂದ ಉದ್ವಿಗ್ನತೆ ಹೆಚ್ಚಾಗಿತ್ತು, ಇದು ಚುನಾವಣೆಯ ನಂತರ ದಂಗೆಯ ಭೀತಿಯನ್ನು ಹುಟ್ಟುಹಾಕಿದೆ. ಚುನಾವಣೆಯಲ್ಲಿ ವಂಚನೆ ನಡೆದಿದೆ ಎಂಬುದು ಮಿಲಿಟರಿ ಅರೋಪವಾಗಿದೆ.
ಎನ್ಎಲ್ಡಿ ವಕ್ತಾರ ಮೈಯೊ ನ್ಯುಂಟ್ ಅವರು ಸುದ್ದಿ ಸಂಸ್ಥೆಗಳಿಗೆ ಕರೆ ಮಾಡಿ, ಸೂಕಿ, ಪಕ್ಷದ ಅಧ್ಯಕ್ಷ ವಿನ್ ಮೈಂಟ್ ಮತ್ತು ಇತರ ನಾಯಕರನ್ನು ಮುಂಜಾನೆ ಕರೆದೊಯ್ಯಲಾಗಿದೆ ಎಂದು ಹೇಳಿದ್ದಾರೆ. “ಈ ಘಟನೆಗೆ ಉದ್ರೇಕದಿಂದ ಪ್ರತಿಕ್ರಿಯಿಸದಂತೆ ನಾನು ನಮ್ಮ ಜನರಿಗೆ ಹೇಳಲು ಬಯಸುತ್ತೇನೆ. ಅಲ್ಲದೇ, ಕಾನೂನಿನ ಪ್ರಕಾರ ಕಾರ್ಯನಿರ್ವಹಿಸಬೇಕೆಂದು ನಾನು ಬಯಸುತ್ತೇನೆ” ಎಂದು ಅವರು ಹೇಳಿದ್ದಾರೆ. ಅಲ್ಲದೇ ನಾನು ಕೂಡ ಬಂಧಿಸಲ್ಪಡುವ ನಿರೀಕ್ಷೆಯಿದೆ ಎಂದಿದ್ದಾರೆ.
ನವೆಂಬರ್ ತಿಂಗಳಲ್ಲಿ ಮಯನ್ಮಾರಿನಲ್ಲಿ ಚುನಾವಣೆ ನಡೆದಿತ್ತು. ಇದರಲ್ಲಿ ಎನ್ಎಲ್ಡಿ ಭರ್ಜರಿ ಜಯಗಳಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.