ನವದೆಹಲಿ: ಮರ್ಕುರಿ ವಿಷಾನಿಲದ ಹೊರಸೂಸುವಿಕೆಯನ್ನು ತಡೆಯುವಲ್ಲಿ ವಿಫಲವಾಗಿರುವ ಯುನಿಲಿವರ್ ಕಂಪನಿ ವಿರುದ್ಧ ರ್ಯಾಪ್ ಹಾಡುಗಾರರು ತಮ್ಮ ಹಾಡಿನ ಮೂಲಕವೇ ವಿಭಿನ್ನ ಪ್ರತಿಭಟನೆ ನಡೆಸಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಹಿಟ್ ಆಗಿತ್ತು.
‘ಕೊಡೈಕೆನಲ್ ವೋಂಟ್’ ಎಂಬ ಹೆಸರಿನ ವಿಭಿನ್ನ ಪ್ರತಿಭಟನಾ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿತ್ತು. ಇದಕ್ಕೆ ಹಲವರ ಬೆಂಬಲ ವ್ಯಕ್ತವಾಗಿತ್ತು.
ಈ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡಿರುವ ಯುನಿಲಿವರ್ ಈ ಬಗೆಗೆ ಕಾಳಜಿ ವ್ಯಕ್ತಪಡಿಸಿದ್ದು, ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಸಮಸ್ಯೆಗೆ ಅಂತ್ಯಹಾಡುವುದಾಗಿ ತನ್ನ ವೆಬ್ಸೈಟ್ನಲ್ಲಿ ಹೇಳಿಕೊಂಡಿದೆ.
ಯುನಿಲಿವರ್ ತನ್ನ ಕೊಡೈಕೆನಲ್ ಕಂಪನಿಯನ್ನು ಮುಚ್ಚಿದೆ. ಆದರೂ ಅದರಲ್ಲಿನ ಮರ್ಕುರಿ ಪಸರಿಸುತ್ತಲೇ ಇದೆ. ಈ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮರ್ಕುರಿ ಅಂಶಗಳುಳ್ಳ ತ್ಯಾಜ್ಯಗಳನ್ನು ಕಂಪನಿಯ ಹೊರಭಾಗದಲ್ಲಿನ ಜಾಗದಲ್ಲಿ ಹಾಕಲಾಗಿದೆ ಎಂಬ ದೂರುಗಳಿವೆ.
ಇದೀಗ ಪ್ರತಿಭಟನೆಯಿಂದ ಎಚ್ಚೆತ್ತುಕೊಂಡಿರುವ ಯುನಿಲಿವರ್, ಕಂಪನಿ ಆವರಣದ ಮಣ್ಣನ್ನು ಸ್ವಚ್ಛಗೊಳಿಸಲು ಮುಂದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.