ನವದೆಹಲಿ: ಕ್ರೈಸ್ಥರ ಪವಿತ್ರ ದಿನ ’ಗುಡ್ ಫ್ರೈಡೆ’ ಸಂದರ್ಭದಲ್ಲಿ ದೇಶದ 24 ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೂರು ದಿನಗಳ ಸಮಾವೇಶ ಕರೆದಿರುವುದಕ್ಕೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ ಮತ್ತು ಪ್ರಧಾನಿ ಶನಿವಾರ ಕರೆದಿರುವ ನ್ಯಾಯಮೂರ್ತಿಗಳ ಔತನಕೂಟವನ್ನೂ ಅವರು ಬಹಿಷ್ಕರಿಸಿದ್ದಾರೆ.
‘ಧಾರ್ಮಿಕ ಮಹತ್ವವಿರುವ ರಜಾ ದಿನಗಳಲ್ಲಿ ಯಾವುದೇ ಸಮಾರಂಭಗಳನ್ನು ಏರ್ಪಡಿಸಬಾರದು. ಭಾರತದ ಜಾತ್ಯಾತೀತತೆಯ ರಕ್ಷಕನಾಗಿ ನಿಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಯಾವುದೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಾಗ ಈ ವಿಷಯವನ್ನು ಗಮನದಲ್ಲಿಟ್ಟುಕೊಳ್ಳಿ. ಎಲ್ಲಾ ಧರ್ಮಗಳ ಪವಿತ್ರ ದಿನಗಳನ್ನು ಗೌರವಿಸಿ, ಸಮಾನ ಪ್ರಾಮುಖ್ಯತೆಯನ್ನು ನೀಡಿ’ ಎಂದು ಮೋದಿಗೆ ಬರೆದ ಪತ್ರದಲ್ಲಿ ಅವರು ತಿಳಿಸಿದ್ದಾರೆ.
ಕುರಿಯನ್ ಅವರು ನಿನ್ನೆಯೇ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಚ್.ಎಲ್,ದತ್ತು ಅವರಿಗೂ ಪತ್ರ ಬರೆದು ಈ ಬಗ್ಗೆ ಅಸಮಾಧಾನ ತೋಡಿಕೊಂಡಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ದತ್ತು ‘ನೀವು ಎತ್ತಿದ ಈ ಪ್ರಶ್ನೆಯಲ್ಲಿ ಸಾಮೂಹಿಕ ಹಿತಾಸಕ್ತಿ ಇದೆಯೋ ಅಥವಾ ಯಾವುದಾದರೂ ವೈಯಕ್ತಿಕ ಹಿತಾಸಕ್ತಿ ಅಡಗಿದೆಯೋ’ ಎಂದು ಕುರಿಯನ್ರನ್ನು ಪ್ರಶ್ನಿಸಿದ್ದರು.
ಎ.3ರಿಂದ 5ರವರೆಗೆ ನ್ಯಾಯಮೂರ್ತಿಗಳ ಸಮಾವೇಶ ನಡೆಯಲಿದೆ. ಇದರಲ್ಲಿ ದೇಶದ 24 ಹೈಕೋರ್ಟ್ಗಳ ನ್ಯಾಯಧೀಶರುಗಳು ಭಾಗವಹಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.