ಆಗ್ರಾ: ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ ಅವರಿಗೆ ಭಾರತೀಯ ಸೇನೆಯೂ ಗೌರವಾರ್ಥವಾಗಿ ಲಿಫ್ಟಿನೆಂಟ್ ಕೊಲೋನಿಯಲ್ ಶ್ರೇಣಿಯನ್ನು ನೀಡಿದೆ.
ಇದೀಗ ಪ್ಯಾರಚೂಟ್ ವಿಂಗ್ನ ಮಿಲಿಟರಿ ಬ್ಯಾಡ್ಜ್ ಪಡೆಯುವ ಮಹತ್ವದ ಆಸೆಯನ್ನು ಹೊತ್ತಿರುವ ದೋನಿ, ಅದಕ್ಕಾಗಿ ಆಗ್ರಾದಲ್ಲಿ ಸೇನಾ ತರಬೇತಿಯನ್ನು ಪಡೆಯುತ್ತಿದ್ದಾರೆ.
ಆಕಾಶದೆತ್ತರಕ್ಕೆ ಹಾರಲಿರುವ ದೋನಿ ಪ್ಯಾರಚೂಟ್ ಜಂಪ್ ಮಾಡಲಿದ್ದಾರೆ, ಆ ಬಳಿಕವಷ್ಟೇ ಅವರಿಗೆ ತನ್ನ ಸೇನಾ ಸಮವಸ್ತ್ರದಲ್ಲಿ ತೊಡಲು ಪ್ಯಾರಚೂಟ್ ವಿಂಗ್ ಮಿಲಿಟರಿ ಬ್ಯಾಡ್ಜ್ ಸಿಗಲಿದೆ. ಈ ಬ್ಯಾಡ್ಜ್ ಪಡೆಯಲು ಅವರು ಸಾಕಷ್ಟು ತರಬೇತಿ ಪಡೆಯುತ್ತಿದ್ದಾರೆ.
ತರಬೇತಿ ಬಳಿಕ ಎನ್-32 ವಾರ್ಪ್ಲೇನ್ನಿಂದ 10 ಸಾವಿರ ಅಡಿ ಎತ್ತರದಿಂದ ಅವರು 5 ಪ್ಯಾರಚೂಟ್ ಜಂಪ್ಗಳನ್ನು ಮಾಡಲಿದ್ದಾರೆ. ಇದಕ್ಕಾಗಿ ನಾಲ್ಕು ವಾರಗಳ ಕಠಿಣ ಸೇನಾ ತರಬೇತಿಯ ಅಗತ್ಯವಿದೆ, ಆ ಬಳಿಕವಷ್ಟೇ ಅವರು ಜಂಪ್ ಹೊಡೆಯಲು ಫಿಟ್ ಆಗಲಿದ್ದಾರೆ.
ಕ್ರಿಕೆಟ್ನಲ್ಲಿ ಅದಮ್ಯ ಸಾಧನೆ ಮಾಡಿರುವ ದೋನಿ ತಮ್ಮ ಬಾಲ್ಯದಲ್ಲಿ ಸೈನಿಕನಾಗುವ ಕನಸು ಕಂಡಿದ್ದವರು. ಇದೀಗ ತಮ್ಮ ಬಾಲ್ಯದ ಕನಸನ್ನು ಅವರು ಈಡೇರಿಸಿಕೊಳ್ಳುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.