ನವದೆಹಲಿ: ಇಂದು ಗೋವಾದ ಪಣಜಿಯಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ಎಫ್ಐ) 51 ನೇ ಆವೃತ್ತಿ ಉದ್ಘಾಟನೆಗೊಂಡಿದೆ. ಕೇಂದ್ರ ಪ್ರಸಾರ ಮತ್ತು ಮಾಹಿ ಸಚಿವ ಪ್ರಕಾಶ್ ಜಾವ್ಡೇಕರ್ ಇದಕ್ಕೆ ಚಾಲನೆಯನ್ನು ನೀಡಿದರು.
ಕನ್ನಡದ ಖ್ಯಾತ ನಟ ಸುದೀಪ್ ಸೇರಿದಂತೆ ಹಲವಾರು ಗಣ್ಯರು ಇದರಲ್ಲಿ ಭಾಗಿಯಾಗಿದ್ದರು.
ಉದ್ಘಾಟನಾ ಸಮಾರಂಭವನ್ನು ಶ್ಯಾಮಪ್ರಸಾದ್ ಮುಖರ್ಜಿ ಕ್ರೀಡಾಂಗಣದಲ್ಲಿ ನೆರವೇರಿಸಲಾಯಿತು. ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಉಪಸ್ಥಿತರಿದ್ದರು.
ಕೋವಿಡ್ 19 ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷ ಐಎಫ್ಎಫ್ಐ ಅನ್ನು ಹೈಬ್ರಿಡ್ ರೀತಿಯಲ್ಲಿ ಆಯೋಜಿಸಲಾಗಿದೆ. ಅಂದರೆ ಚಲನಚಿತ್ರಗಳ ಭೌತಿಕ ಮತ್ತು ವರ್ಚುವಲ್ ಸ್ಕ್ರೀನಿಂಗ್ ಇರುತ್ತದೆ ಎಂದರ್ಥ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.