ಗಾಂಧಿನಗರ: ಗುಜರಾತ್ ಸೂರತ್ನ ವಜ್ರ ವ್ಯಾಪಾರಿಯೊಬ್ಬರು ಶುಕ್ರವಾರ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ 11 ಕೋಟಿ ರೂ.ದೇಣಿಗೆ ನೀಡಿದ್ದಾರೆ. ವಜ್ರ ವ್ಯಾಪಾರಿ ಗೋವಿಂದ್ಭಾಯ್ ಧೋಲಾಕಿಯಾ ಅವರು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಕಚೇರಿಯಲ್ಲಿ ದೇಣಿಗೆ ಸಮರ್ಪಿಸಿದರು.
ವಿಎಚ್ಪಿ ಮತ್ತು ಆರ್ಎಸ್ಎಸ್ ಸದಸ್ಯರು ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಇಲ್ಲಿ ದೇಣಿಗೆ ಸಂಗ್ರಹವನ್ನು ಇಂದಿನಿಂದ ಪ್ರಾರಂಭಿಸಿದ್ದಾರೆ. ಗೋವಿಂದ್ಭಾಯ್ ಧೋಲಾಕಿಯ ಗುಜರಾತ್ನ ಸೂರತ್ನ ವಜ್ರದ ವ್ಯಾಪಾರಿ. ರಾಮಕೃಷ್ಣ ಡೈಮಂಡ್ನ ಮಾಲೀಕ. ಅವರು ಆರ್ಎಸ್ಎಸ್ನೊಂದಿಗೆ ವರ್ಷಗಳಿಂದ ಸಂಬಂಧ ಹೊಂದಿದ್ದಾರೆ. 1992 ರಲ್ಲಿ ಧೋಲಾಕಿಯಾ ಸಹ ಮಂದಿರ ನಿರ್ಮಾಣ ಚಳುವಳಿಯಲ್ಲಿ ಭಾಗಿಯಾಗಿದ್ದರು. ಶುಕ್ರವಾರ ಅವರು ದೇವಾಲಯದ ನಿರ್ಮಾಣಕ್ಕಾಗಿ 11 ಕೋಟಿ ರೂ.ನೀಡಿದ್ದಾರೆ.
ಗೋವಿಂದ್ಭಾಯ್ ಧೋಲಾಕಿಯಾ ಮಾತ್ರವಲ್ಲ, ಸೂರತ್ನ ಮಹೇಶ್ ಕಬೂತರ್ವಾಲಾ ಅವರು 5 ಕೋಟಿ ರೂ, ಲವ್ಜಿ ಬಾದ್ಶಾ ಅವರು ರಾಮ ಮಂದಿರ ನಿರ್ಮಾಣಕ್ಕೆ 1 ಕೋಟಿ ರೂ ನೀಡಿದ್ದಾರೆ. ಗುಜರಾತ್ನ ಹಲವಾರು ವ್ಯಾಪಾರಿಗಳು 5 ರಿಂದ 21 ಲಕ್ಷ ರೂ.ದೇಣಿಗೆ ನೀಡಿದ್ದಾರೆ.
ಬಿಜೆಪಿಯ ಗೋರ್ಧನ್ ಜಡಾಫಿಯಾ ಮತ್ತು ಖಜಾಂಚಿ ಸುರೇಂದ್ರ ಪಟೇಲ್ ಅವರು ಇತ್ತೀಚೆಗೆ ತಲಾ 5 ಲಕ್ಷ ರೂ.ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.