ನವದೆಹಲಿ: ರೂ. 45, 696 ಕೋಟಿ ವೆಚ್ಚದಲ್ಲಿ 73 ತೇಜಸ್ ಎಲ್ಸಿಎ ಫೈಟರ್ ಜೆಟ್ಗಳು ಮತ್ತು 10 ತರಬೇತುದಾರ ವಿಮಾನಗಳನ್ನು ಖರೀದಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ.
ತೇಜಸ್ ಎಂಕೆ -1 ಎ ಲೈಟ್ ಕಾಂಬಾಟ್ ಏರ್ಕ್ರಾಫ್ಟ್ (ಎಲ್ಸಿಎ) ಸ್ಥಳೀಯವಾಗಿ ವಿನ್ಯಾಸಗೊಳಿಸಿದ ಮತ್ತು ತಯಾರಿಸಿದ ಯುದ್ಧವಿಮಾನವಾಗಿದ್ದು, ಇದು ಕ್ರಿಯಾತ್ಮಕ ಕಾರ್ಯಾಚರಣಾ ಸಾಮರ್ಥ್ಯಗಳನ್ನು ಹೊಂದಿದ್ದು, ಇದರಲ್ಲಿ ಸಕ್ರಿಯ ಎಲೆಕ್ಟ್ರಾನಿಕ್-ಸ್ಕ್ಯಾನ್ಡ್ ಅರೇ (ಎಇಎಸ್ಎ) ರಾಡಾರ್, ಎಲೆಕ್ಟ್ರಾನಿಕ್ ವಾರ್ಫೇರ್ (ಇಡಬ್ಲ್ಯೂ) ಸೂಟ್ ಮತ್ತು ಗಾಳಿಯಲ್ಲೇ ಇಂಧನ ತುಂಬುವಿಕೆ (AAR) ಸಾಮರ್ಥ್ಯವನ್ನು ಹೊಂದಿದೆ.
ಬುಧವಾರ ಸಂಜೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, 73 ತೇಜಸ್ ಎಲ್ಸಿಎ ಯುದ್ಧ ವಿಮಾನವು “ಭಾರತೀಯ ವಾಯುಪಡೆಯ ಕಾರ್ಯಾಚರಣೆಯ ಅಗತ್ಯತೆಗಳನ್ನು ಪೂರೈಸುವ ಪ್ರಬಲ ವೇದಿಕೆಯಾಗಲಿದೆ ಎಂದು ಹೇಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜನಾಥ್ ಸಿಂಗ್, “ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ನಡೆದ ಭದ್ರತಾ ಸಂಪುಟ ಸಮಿತಿ ಯಲ್ಲಿ ಭಾರತೀಯ ವಾಯುಪಡೆಯ ಸ್ವದೇಶಿ ಫೈಟರ್ ಜೆಟ್ ‘ಎಲ್ಸಿಎ-ತೇಜಸ್’ ಅನ್ನು ಬಲಪಡಿಸಲು ಸುಮಾರು 48000 ಕೋಟಿ ರೂ. ಮೌಲ್ಯದ ಅತಿದೊಡ್ಡ ಸ್ಥಳೀಯ ರಕ್ಷಣಾ ಖರೀದಿ ಒಪ್ಪಂದವನ್ನು ಅನುಮೋದಿಸಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.