ಕುಮಟಾ: ತಾಲೂಕಿಗೆ ಸಂಬಂಧಿಸಿದಂತೆ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಮಹಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಪ್ರಚಾರಕ್ ಸುಧಾಕರ್, ಜನವರಿ 15 ರಿಂದ ಪೆಬ್ರವರಿ 5 ರ ವರೆಗೆ ಇಡಿ ದೇಶಾದ್ಯಂತ ನಡೆಯಲಿದೆ. ಈ ಅಭಿಯಾನದಲ್ಲಿ ನಾವು ಪಾಲ್ಗೊಂಡು ನಮ್ಮ ಪಾಲಿನ ನಿಧಿಯನ್ನು ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸಮರ್ಪಿಸಬೇಕು. ಅದಕ್ಕಾಗಿ ಮನೆ ಮನೆಗೆ ಶ್ರೀರಾಮ ಭಕ್ತರು ಸಂಪರ್ಕ ಮಾಡಲಿದ್ದಾರೆ. ಶ್ರೀರಾಮ ದೇಶದ ಅಸ್ಮಿತೆ. ಶ್ರೀರಾಮ ಮಂದಿರ ರಾಷ್ಟ್ರ ಮಂದಿರವಾಗಲಿದೆ ಎಂದು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಹಳದೀಪುರ ಶಾಂತಾಶ್ರಮದ ಶ್ರೀ ವಾಮನಾಶ್ರಮ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಮೊಘಲರ ದುರಾಡಳಿತದಿಂದ ರಾಮಮಂದಿರ ನಾಶವಾಯ್ತು. ಅದನ್ನು ಮರಳಿ ನಿರ್ಮಿಸುವಂತಹ ಪುಣ್ಯದ ಕೆಲಸ ನಮಗೆ ಸಿಕ್ಕಿದೆ.
ಲವ ಕುಶರು ನಿರ್ಮಿಸಿದ ಭವ್ಯ ರಾಮಮಂದಿರವನ್ನು, ಕಾಲಕ್ರಮೇಣ ಅದನ್ನು ಜಿರ್ಣೋದ್ಧಾರ ಮಾಡಿದ ವಿಕ್ರಮಾದಿತ್ಯನ ಕಾರ್ಯವನ್ನು ಮರಳಿ ಮಾಡುವಂತಹ ಅವಕಾಶ ನಮ್ಮದಾಗಿದೆ. ಆ ಮೂಲಕ ಹಳೆಯ ವೈಭವವನ್ನು ಮರಳಿ ತರುವ ಪುಣ್ಯಕಾರ್ಯದಲ್ಲಿ ಶಕ್ತಿಮೀರಿ ಸೇವೆ ಸಲ್ಲಿಸಬೇಕು ಎಂದು ಶ್ರೀಗಳು ನುಡಿದರು.
ಶ್ರೀರಾಮನ ಸೇವೆಯಿಂದ ಕೆಡುಕುಗಾಲನ್ನು ಕಳೆದು ಆಪತ್ತು ವಿಪತ್ತು ದೂರವಾಗುವುದು. ಕೇವಲ ಸ್ಮರಣೆ ಮಾತ್ರದಿಂದ ಆತ ಸುಖ ಸಂತೋಷವನ್ನು ಕರುಣಿಸುವವನು. ಜೀವ ಮತ್ತು ಪರಮಾತ್ಮ ಒಂದಾಗಬೇಕು. ಅಂತಹ ಸಂಸ್ಕಾರ ನಮ್ಮದಾಗಬೇಕು. ಈ ಹಿನ್ನೆಲೆಯಲ್ಲಿ ಪ್ರಭು ರಾಮನ ಆದರ್ಶಗಳನ್ನು ಮೈಗೂಡಿಸಿಕೊಳ್ಳೋಣ ಎಂದು ಶ್ರೀಗಳು ತಿಳಿಸಿದರು.
ವೇದಿಕೆಯಲ್ಲಿ ಡಾ. ವಿ.ಜಿ. ಶೆಟ್ಟಿ ಜಿಲ್ಲಾ ಅಧ್ಯಕ್ಷರು. ವಿಶ್ವ ಹಿಂದು ಪರಿಷತ್ ಕಾರವಾರ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.