ಬೆಂಗಳೂರು: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ದೇಶದೆಲ್ಲೆಡೆ ಜ. 15 ರಿಂದ ತೊಡಗಿದಂತೆ ಆರಂಭವಾಗಲಿದೆ. ಇದೇ ಸಂದರ್ಭದಲ್ಲಿ ಆಗ್ರಾದ 50 ಸಾವಿರ ಸಿಂಧಿ ಕುಟುಂಬಗಳು ರಾಮ ಮಂದಿರ ನಿರ್ಮಾಣ ನಿಧಿಗೆ ಒಬ್ಬೊಬ್ಬರ ಪರವಾಗಿ ತಲಾ 51 ರೂ. ಗಳಂತೆ ನೀಡುವುದಕ್ಕೆ ಮುಂದಾಗಿವೆ.
ಈ ನಿಧಿ ಸಮರ್ಪಣಾ ಅಭಿಯಾನಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ಪತ್ರಿಕಾಗೋಷ್ಠಿ ನಡೆಸಿದ್ದು, ಜ. 15 ರಿಂದ ತೊಡಗಿದಂತೆ ದೇಶದಲ್ಲಿ ಮಂದಿರ ನಿರ್ಮಾಣ ನಿಧಿ ಸಮರ್ಪಣಾ ಅಭಿಯಾನ ನಡೆಸಲಾಗುವುದು. ಇದಕ್ಕೆ ವಿದ್ಯಾರ್ಥಿಗಳು, ರಿಕ್ಷಾ ಚಾಲಕರು ಸೇರಿದಂತೆ ದೇಶದ ಎಲ್ಲಾ ಸ್ಥರಗಳಲ್ಲಿ ಕೆಲಸ ಮಾಡುವ ಜನರೂ ಸಹ ತಮ್ಮ ಕೈಲಾದ ಸಹಾಯವನ್ನು ನೀಡಬಹುದು. ಆ ಮೂಲಕ ರಾಮ ಮಂದಿರ ನಿರ್ಮಾಣ ಕೈಂಕರ್ಯದಲ್ಲಿ ಭಾಗವಹಿಸಬಹುದು ಎಂದು ತಿಳಿಸಿತ್ತು.
ಇದೀಗ ಅಯೋಧ್ಯೆಯ ಭವ್ಯ ರಾಮ ಮಂದಿರದ ನಿರ್ಮಾಣದ ಮೂಲಕ ರಾಷ್ಟ್ರದ ಸನಾತನ ಸಂಸ್ಕೃತಿಯನ್ನು ಮತ್ತೆ ಕಟ್ಟುವ ಕಾರ್ಯಕ್ಕೆ ಕೈಜೋಡಿಸಲು ಆಗ್ರಾದಲ್ಲಿ ವಾಸವಿರುವ 50 ಸಾವಿರ ಸಿಂಧಿ ಕುಟುಂಬಗಳು ಮುಂದಾಗಿವೆ. ತಲಾ 51 ರೂ. ಗಳಂತೆ 50 ಸಾವಿರ ಕುಟುಂಬಗಳು ದೇಣಿಗೆಯನ್ನು ನೀಡುವುದಾಗಿ ತಿಳಿಸಿವೆ. ಆ ಮೂಲಕ ರಾಮನ ಮೇಲಿನ ತಮ್ಮ ಭಕ್ತಿ, ಪ್ರೀತಿಯನ್ನು ಸಿಂಧಿ ಕುಟುಂಬಗಳು ವ್ಯಕ್ತಪಡಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.