ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲಿಗರು ವಾಷಿಂಗ್ಟನ್ನಲ್ಲಿ ಯುಎಸ್ ಕ್ಯಾಪಿಟಲ್ ಮೇಲೆ ನಡೆಸಿದ ದಾಳಿ ಬಗ್ಗೆ ವಿಶ್ವ ನಾಯಕರು ಮತ್ತು ಸರ್ಕಾರಗಳು ಬುಧವಾರ ಆಘಾತ ಮತ್ತು ಆಕ್ರೋಶ ವ್ಯಕ್ತಪಡಿಸಿವೆ.
ಘಟನೆಯನ್ನು ಖಂಡಿಸಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು, “ಯು.ಎಸ್ ಕಾಂಗ್ರೆಸ್ಸಿನಲ್ಲಿನ ನಾಚಿಕೆಗೇಡಿನ ದೃಶ್ಯಗಳನ್ನು ಖಂಡಿಸುತ್ತೇನೆ. ಯುನೈಟೆಡ್ ಸ್ಟೇಟ್ಸ್ ವಿಶ್ವದಾದ್ಯಂತ ಪ್ರಜಾಪ್ರಭುತ್ವಕ್ಕಾಗಿ ನಿಂತಿದೆ ಮತ್ತು ಶಾಂತಿಯುತ ಮತ್ತು ಕ್ರಮಬದ್ಧವಾದ ಅಧಿಕಾರ ವರ್ಗಾವಣೆ ನಡೆಯುವುದು ಈಗಿನ ಅತ್ಯಗತ್ಯ” ಎಂದಿದ್ದಾರೆ.
ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಟ್ವಿಟ್ ಮಾಡಿ, “ಯುಎಸ್ ತನ್ನ ಪ್ರಜಾಪ್ರಭುತ್ವದಲ್ಲಿ ಬಹಳ ಹೆಮ್ಮೆಪಡುತ್ತದೆ ಮತ್ತು ಅಧಿಕಾರದ ಕಾನೂನುಬದ್ಧ ಮತ್ತು ಸರಿಯಾದ ಬದಲಾವಣೆಯನ್ನು ನಿರಾಶೆಗೊಳಿಸುವ ಈ ಹಿಂಸಾತ್ಮಕ ಪ್ರಯತ್ನಗಳಿಗೆ ಯಾವುದೇ ಸಮರ್ಥನೆ ಸಾಧ್ಯವಿಲ್ಲ” ಎಂದಿದ್ದಾರೆ.
ಯೂರೋಪಿನ ಒಕ್ಕೂಟ ಘಟನೆಯನ್ನು ಖಂಡಿಸಿದೆ. ಇಯು ವಿದೇಶಾಂಗ ನೀತಿ ಮುಖ್ಯಸ್ಥರು “ಯುಎಸ್ ಪ್ರಜಾಪ್ರಭುತ್ವದ ಮೇಲಿನ ಆಕ್ರಮಣ” ವನ್ನು ಖಂಡಿಸುವುದಾಗಿ ಹೇಳಿದ್ದಾರೆ. “ವಿಶ್ವದ ದೃಷ್ಟಿಯಲ್ಲಿ, ಅಮೆರಿಕದ ಪ್ರಜಾಪ್ರಭುತ್ವ ಇಂದು ರಾತ್ರಿ ಮುತ್ತಿಗೆಯಲ್ಲಿದೆ” ಎಂದು ಜೋಸೆಪ್ ಬೊರೆಲ್ ಟ್ವೀಟ್ ಮಾಡಿದ್ದಾರೆ.
ಈ ಕ್ರಮವನ್ನು “ಯುಎಸ್ ಪ್ರಜಾಪ್ರಭುತ್ವ, ಅದರ ಸಂಸ್ಥೆಗಳು ಮತ್ತು ಕಾನೂನಿನ ನಿಯಮಗಳ ಮೇಲಿನ ಆಕ್ರಮಣ” ಎಂದು ಅವರು ಹೇಳಿದರು. “ಇದು ಅಮೆರಿಕವಲ್ಲ, ನವೆಂಬರ್ 3 ರ ಚುನಾವಣಾ ಫಲಿತಾಂಶಗಳನ್ನು ಸಂಪೂರ್ಣವಾಗಿ ಗೌರವಿಸಬೇಕು” ಎಂದಿದ್ದಾರೆ.
ಫ್ರೆಂಚ್ ವಿದೇಶಾಂಗ ಸಚಿವ ಜೀನ್-ಯ್ವೆಸ್ ಲೆ ಡ್ರಿಯಾನ್ “ಪ್ರಜಾಪ್ರಭುತ್ವದ ಮೇಲಿನ ಗಂಭೀರ ದಾಳಿ” ಯನ್ನು ಖಂಡಿಸಿದರು.
“ಅಮೆರಿಕನ್ ಸಂಸ್ಥೆಗಳ ಮೇಲಿನ ಹಿಂಸಾಚಾರವು ಪ್ರಜಾಪ್ರಭುತ್ವದ ಮೇಲಿನ ಗಂಭೀರ ದಾಳಿಯಾಗಿದೆ. ನಾನು ಅದನ್ನು ಖಂಡಿಸುತ್ತೇನೆ” ಎಂದು ಲೆ ಡ್ರಿಯಾನ್ ಟ್ವೀಟ್ ಮಾಡಿದ್ದಾರೆ. “ಅಮೆರಿಕಾದ ಜನರ ಇಚ್ಛಾಶಕ್ತಿ ಮತ್ತು ಮತಗಳನ್ನು ಗೌರವಿಸಬೇಕು.” ಎದಿದ್ದಾರೆ.
ಜರ್ಮನಿಯ ವಿದೇಶಾಂಗ ಸಚಿವ ಹೆಕೊ ಮಾಸ್ ಅವರು ಟ್ರಂಪ್ ಬೆಂಬಲಿಗರಿಗೆ “ಪ್ರಜಾಪ್ರಭುತ್ವವನ್ನು ಹಾಳು ಮಾಡುವುದನ್ನು ನಿಲ್ಲಿಸಬೇಕು” ಎಂದು ಕರೆ ನೀಡಿದರು.
“ಟ್ರಂಪ್ ಮತ್ತು ಅವರ ಬೆಂಬಲಿಗರು ಅಂತಿಮವಾಗಿ ಅಮೆರಿಕಾದ ಮತದಾರರ ನಿರ್ಧಾರವನ್ನು ಒಪ್ಪಿಕೊಳ್ಳಬೇಕು ಮತ್ತು ಪ್ರಜಾಪ್ರಭುತ್ವವನ್ನು ಹಾಳು ಮಾಡುವುದನ್ನು ನಿಲ್ಲಿಸಬೇಕು” ಎಂದು ಮಾಸ್ ಟ್ವೀಟ್ ಮಾಡಿದ್ದಾರೆ.
“ವಾಷಿಂಗ್ಟನ್ ಡಿಸಿಯಿಂದ ಈ ನಂಬಲಾಗದ ಚಿತ್ರಗಳನ್ನು ನೋಡಲು ಪ್ರಜಾಪ್ರಭುತ್ವದ ಶತ್ರುಗಳು ಮಾತ್ರ ಸಂತೋಷಪಡುತ್ತಾರೆ” ಎಂದು ಅವರು ಹೇಳಿದರು.
ಭಾರತ, ಐರ್ಲೆಂಡ್, ಗ್ರೀಸ್, ಟರ್ಕಿ ಸೇರಿದಂತೆ ದೇಶದ ನಾನಾ ರಾಷ್ಟ್ರಗಳು ಈ ಘಟನೆಯನ್ನು ತೀವ್ರವಾಗಿ ಖಂಡಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.