ಚೆನ್ನೈ: ಜನಾನುರಾಗಿ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಸ್ವರ್ಗಸ್ಥರಾಗಿ ಕೆಲವೇ ದಿನಗಳಾಗಿವೆ, ದೇಶ ಆ ನೋವಿನಿಂದ ಇನ್ನೂ ಸಂಪೂರ್ಣ ಚೇತರಿಸಿಕೊಂಡಿಲ್ಲ. ಆದರೆ ಆ ಧೀಮಂತ ಚೇತನ ಆಪ್ತರ ನಡುವೆ ಈಗಾಗಲೇ ಅವರ ಪರಂಪರೆಯ ಒಡೆತನಕ್ಕೆ ಕಚ್ಚಾಟಗಳು ಆರಂಭವಾಗಿದೆ.
ಇದರಿಂದಾಗಿ ಕಲಾಂ ಸತ್ತ ಬಳಿಕವೂ ಜೀವಂತವಾಗಿರುತ್ತದೆ ಎನ್ನಲಾಗಿದ್ದ ಅವರ ಟ್ವಿಟರ್ ಅಕೌಂಟ್ ೧೦ ದಿನಗಳ ಬಳಿಕ ಸ್ಥಗಿತ ಆಗಿದೆ.
ಕಲಾಂ ಆಪ್ತ ಸೃಜನ್ ಪಾಲ್ ಅವರು, ಕಲಾಂ ನಿಧನದ ಬಳಿಕ ಅವರ ಟ್ವಿಟರ್ ಅಕೌಂಟ್ನ್ನು ಕಲಾಂ ನೆನಪಿನಲ್ಲಿ ಎಂದು ಬದಲಾಯಿಸಿ ಅದರ ನಿರ್ವಹಣೆ ಮಾಡುತ್ತಿದ್ದರು. ಅವರ ಹೆಸರಲ್ಲಿ ಫೇಸ್ಬುಕ್ ಪೇಜ್ ಕ್ರಿಯೆಟ್ ಮಾಡಿದ್ದರು, ಕಲಾಂ ನಿಧನದ ವೇಳೆಯೂ ಸೃಜನ್ ಅವರ ಜೊತೆಗಿದ್ದರು.
ಆದರೆ ಕಲಾಂ ಕಛೇರಿ ಈ ಬಗ್ಗೆ ಪ್ರಕಟನೆ ಹೊರಡಿಸಿದ್ದು, ಸೃಜನ್ ಮತ್ತು ವಿ.ಪೊನ್ರಾಜ್ ಅವರು ಕಲಾಂ ಅಧಿಕೃತ ಪ್ರತಿನಿಧಿಗಳಲ್ಲ. ಸೃಜನ್ ಐಐಎಂ ಶಿಲ್ಲಾಂಗ್ ವಿದ್ಯಾರ್ಥಿಯಾಗಿದ್ದ ಕಾರಣ ಅವರು ಆಕಸ್ಮಿವಾಗಿ ಅಲ್ಲಿದ್ದರು ಎಂದಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸೃಜನ್, ನಾನು ಕಲಾಂ ಬಗ್ಗೆ ನೀಡುತ್ತಿರುವ ಅಭಿಪ್ರಾಯಗಳು ನನ್ನ ವೈಯಕ್ತಿಕ ಅಷ್ಟೇ ಎಂದಿದ್ದಾರೆ.
ಅದೇನೆಯಿರಲಿ ಕಲಾಂ ಸಾವಿನ ಬಳಿಕವೂ ಅವರ ಟ್ವಿಟರ್ ನೋಡಲು ಬಯಸಿದ್ದ ಅಭಿಮಾನಿಗಳಿಗೀಗ ನಿರಾಶೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.