ಉಧಮ್ಪುರ್: ಕಾಶ್ಮೀರದಲ್ಲಿ ಸೆರೆಸಿಕ್ಕ ಉಗ್ರ ನಮ್ಮವನಲ್ಲ ಎಂದು ಪಾಕಿಸ್ಥಾನ ಹೇಳುತ್ತಿದೆ, ಆದರೆ ಪಾಕ್ನ ವ್ಯಕ್ತಿಯೊಬ್ಬರು ಉಗ್ರ ನಾವೇದ್ ನನ್ನ ಮಗ, ಆತನಿಗೂ ಲಷ್ಕರ್ ಸಂಘಟನೆಗೂ ಸಂಬಂಧವಿತ್ತು ಎಂದು ಹೇಳಿಕೊಂಡಿದ್ದಾರೆ.
ತನಿಖಾಧಿಕಾರಿಗಳು ನೀಡಿದ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದ ಹಿಂದೂಸ್ತಾನ್ ಟೈಮ್ಸ್, ನಾವೇದ್ ತಂದೆ ಮೊಹಮ್ಮದ್ ಯಾಕೂಬ್ ಜೊತೆ ಸಂದರ್ಶನ ನಡೆಸಿದೆ.
ಪಕ್ಕಾ ಪಂಜಾಬಿ ಭಾಷೆಯಲ್ಲಿ ಮಾತನಾಡಿದ್ದ ಅವರು, ‘ನಾವೇದ್ ನನ್ನ ಮಗ, ಆತ ಲಷ್ಕರ್ ಉಗ್ರರ ಸಂಪರ್ಕ ಹೊಂದಿದ್ದ. ಅವರು ನನ್ನ ಮಗ ಸಾಯಲಿ ಎಂದು ಬಯಸಿದ್ದರು, ಈಗ ಆತ ಜೀವಂತವಾಗಿ ಸೆರೆ ಸಿಕ್ಕಿದ್ದಾನೆ. ಹೀಗಾಗಿ ಸೇನೆ ಮತ್ತು ಲಷ್ಕರ್ ಇಬ್ಬರೂ ನಮ್ಮ ಬೆನ್ನು ಬಿದ್ದಿದ್ದಾರೆ. ಅವರು ಖಂಡಿತವಾಗಿಯೂ ನಮ್ಮನ್ನು ಕೊಲ್ಲುತ್ತಾರೆ’ ಎಂದು ದುಗುಡದಿಂದ ಹೇಳಿಕೊಂಡಿದ್ದಾರೆ.
ಬಳಿಕ ಅವರ ಫೋನ್ ಕರೆ ಮೊಟಕುಗೊಂಡಿದೆ, ಆದಾದ ಬಳಿಕ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ.
ಮೂಲಗಳ ಪ್ರಕಾರ ನಾವೇದ್ 20 ವರ್ಷದವನಾಗಿದ್ದು, ಈತನಿಗೆ ಇಬ್ಬರು ಸಹೋದರರು ಹಾಗೂ ಒರ್ವ ಸಹೋದರಿ ಇದ್ದಾಳೆ. ಒಬ್ಬ ಸಹೋದರ ಉಪನ್ಯಾಸಕನಾಗಿದ್ದಾನೆ ಎನ್ನಲಾಗಿದೆ.
ಅದೇನೆಯಿರಲಿ ನಾವೇದ್ ಪಾಕಿಸ್ಥಾನಿಯೇ ಎಂಬುದು ಇದರಿಂದ ಸಾಬೀತಾಗಿದೆ, ಆದರೆ ಸತ್ಯವನ್ನು ಒಪ್ಪಿಕೊಳ್ಳುವ ಧೈರ್ಯ ಪಾಕಿಸ್ಥಾನ ಮಾಡುವುದಿಲ್ಲ ಎಂಬುದು ಕೂಡ ಸತ್ಯ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.