ಉತ್ಥಾನ ಮಾಸಪತ್ರಿಕೆಯಿಂದ ವಿದ್ಯಾರ್ಥಿಗಳಲ್ಲಿ ತಮ್ಮ ಭವಿಷ್ಯದ ಕುರಿತು ಸಕಾರಾತ್ಮಕ, ಆದರ್ಶ ಚಿಂತನೆಯನ್ನು ಪ್ರಚೋದಿಸಲು ಕಾಲೇಜು ವಿದ್ಯಾರ್ಥಿಗಳಿಗಾಗಿ “ಡಾII ಕಲಾಂ ಚಿಂತನೆಯ ಬೆಳಕಿನಲ್ಲಿ ನನ್ನ ಭವಿಷ್ಯದ ದಾರಿ” ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ವಿಷಯ: “ಡಾII ಕಲಾಂ ಚಿಂತನೆಯ ಬೆಳಕಿನಲ್ಲಿ ನನ್ನ ಭವಿಷ್ಯದ ದಾರಿ”
- ಮೊದಲ ಬಹುಮಾನ: ರೂ. 8,000
- ದ್ವಿತೀಯ ಬಹುಮಾನ: ರೂ. 5,000
- ತೃತೀಯ ಬಹುಮಾನ: ರೂ. 3,000
- ಎರಡು ಮೆಚ್ಚುಗೆ ಬಹುಮಾನಗಳು: ತಲಾ ರೂ. 1,000
ಸ್ಪರ್ಧೆಯ ನಿಯಮಗಳು:
- ಪದವಿ ಮತ್ತು ಪದವಿಗೆ ಮೇಲ್ಪಟ್ಟ ವಿದ್ಯಾರ್ಥಿಗಳು ಮಾತ್ರ ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
- ಸ್ಪರ್ಧೆಗೆ ಕಳುಹಿಸುವ ಪ್ರಬಂಧ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಎಲ್ಲಿಯೂ ಯಾವುದೇ ರೂಪದಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
- ಪ್ರಬಂಧ 1500 ಪದಗಳನ್ನು ಮೀರಬಾರದು.
- ವಿದ್ಯಾರ್ಥಿಗಳು ತಮ್ಮ ಪ್ರಬಂಧವನ್ನು ಕಾಲೇಜು-ವಿಭಾಗ ಮುಖ್ಯಸ್ಥರಿಂದ ದೃಢೀಕರಿಸಬೇಕು.
- ಸ್ಪರ್ಧಿಗಳು ತಮ್ಮ ಹೆಸರು, ವಿಳಾಸ, ಕಿರುಪರಿಚಯ ಮುಂತಾದ ವಿವರಗಳನ್ನು ಪ್ರಬಂಧದ ಜೊತೆಯಲ್ಲಿ ಬರೆಯದೆ ಪ್ರತ್ಯೇಕ ಪುಟದಲ್ಲಿ ಬರೆದು ಕಳುಹಿಸಬೇಕು. ಜೊತೆಗೆ ಸ್ಪರ್ಧಿಯ ಭಾವಚಿತ್ರವೂ ಇರಲಿ.
- ನುಡಿ, ಬರಹ ಅಥವಾ ಯುನಿಕೋಡ್ ತಂತ್ರಾಂಶದಲ್ಲಿ ಪ್ರಬಂಧವನ್ನು ಸಿದ್ಧಪಡಿಸಿ ಇ-ಮೇಲ್ ಮೂಲಕವೂ ಕಳುಹಿಸಬಹುದು. ಇ-ಮೇಲ್ ವಿಳಾಸ: utthana1965@gmail.com
- ಬಹುಮಾನಿತ ಪ್ರಬಂಧವನ್ನು ಯಾವುದೇ ಸ್ವರೂಪದಲ್ಲಿ, ಯಾವಾಗ ಬೇಕಾದರೂ ಬಳಸುವ ಹಕ್ಕುಗಳನ್ನು ’ಉತ್ಥಾನ’ ಕಾಯ್ದಿರಿಸಿಕೊಂಡಿದೆ.
- ಎಲ್ಲ ವಿಚಾರಗಳಲ್ಲೂ ವ್ಯವಸ್ಥಾಪಕರದ್ದೇ ಅಂತಿಮ ತೀರ್ಮಾನ.
- ಪ್ರಬಂಧಗಳು ತಲಪಲು ಕೊನೆಯ ದಿನಾಂಕ: ಸೆಪ್ಟೆಂಬರ್ 15, 2015
ವಿಳಾಸ: ಸಂಪಾದಕರು, ಉತ್ಥಾನ’ ಪ್ರಬಂಧ ಸ್ಪರ್ಧೆ 2015
ಕೇಶವ ಶಿಲ್ಪ’, ಕೆಂಪೇಗೌಡನಗರ, ಬೆಂಗಳೂರು – 560019
ದೂರವಾಣಿ: 080-26612730/31/32
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.