ಹಿರೋಶಿಮ: ಜಪಾನಿನ ಹಿರೋಶಿಮ ನಗರದ ಮೇಲೆ ಅಮೆರಿಕ ಅಣುಬಾಂಬ್ ಹಾಕಿದ ಅಮಾನುಷ ಭೀಕರ ಘಟನೆಗೆ ಇಂದು 70 ವರ್ಷಗಳು ಸಂದಿವೆ. ಈ ಹಿನ್ನಲೆಯಲ್ಲಿ ಜಪಾನ್ ಜನತೆ ಇಂದು ಆ ಕರಾಳ ಘಟನೆಯ ವರ್ಷಾಚರಣೆ ನಡೆಸುತ್ತಿದ್ದಾರೆ.
ಪ್ರಧಾನಿ ಶಿಂಜೋ ಅಬೆ ಸೇರಿದಂತೆ ಹಲವಾರು ಸಚಿವರು, ವಿದೇಶಿ ಗಣ್ಯರು ಜಪಾನಿನ ಪಶ್ಚಿಮ ನಗರವಾದ ಹಿರೋಶಿಮದಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 8.15ರ ಸುಮಾರಿಗೆ ಕೆಲ ನಿಮಿಷಗಳ ಕಾಲ ಮೌನಾಚರಣೆ ನಡೆಸಿದರು.
1945 ರ ಆಗಸ್ಟ್ 6 ರಂದು ಎರಡನೇ ಮಹಾಯುದ್ಧದ ಸಂದರ್ಭ ಅಮೆರಿಕಾದ ಎನೋಲ ಗೇ ಎಂಬ ವ್ಯಕ್ತಿ ‘ಲಿಟ್ಲ್ ಬಾಯ್’ ಎಂಬ ಹೆಸರಿನ ಅಣುಬಾಂಬನ್ನು ಹಿರೋಶಿಮದ ಮೇಲೆ ಹಾಕಿದ್ದ. ಈ ಬಾಂಬಿನ ತೀವ್ರತೆ ಎಷ್ಟಿತ್ತೆಂದರೆ ಸ್ಟೀಲನ್ನೂ ಕರಗಿಸಬಲ್ಲಂತಹ 4,000 ಡಿಗ್ರಿ ಸೆಲ್ಸಿಯಸ್ ಬಿಸಿ ಈ ಬಾಂಬಿನಿಂದ ಉತ್ಪನ್ನವಾಗಿತ್ತು. ಹೀರೋಶಿಮದ ಭೂಗರ್ಭ ಕೂಡ ಇದರ ತೀವ್ರತೆಗೆ ಹಾನಿಗೊಳಗಾಯಿತು.
14 ಸಾವಿರ ಜನರು ಸತ್ತರು, ಲೆಕ್ಕವಿಲ್ಲದಷ್ಟು ಜನ ಗಾಯಗೊಂಡರು, ಈಗಲೂ ಅಲ್ಲಿನ ಹೆಚ್ಚಿನ ಮಕ್ಕಳು ಅಂಗವಿಕಲರಾಗಿಯೇ ಹುಟ್ಟುತ್ತಿದ್ದಾರೆ. ಇಲ್ಲಿಗೆ ತನ್ನ ಕ್ರೂರತೆಯನ್ನು ನಿಲ್ಲಿಸದ ಅಮೆರಿಕ ಆಗಸ್ಟ್ 9 ರಂದು ಮತ್ತೆ ಜಪಾನಿನ ನಾಗಸಾಕಿ ಎಂಬ ನಗರದ ಮೇಲೆ ಅಣುಬಾಂಬ್ ಹಾಕಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.